ಕಾರವಾರ(KARWAR) : ಅಮದಳ್ಳಿಯ ಶ್ರೀ ವೀರ ಗಣಪತಿ ದೇವಾಲಯದ ಕಳ್ಳತನ ಬೇಧಿಸುವ ಮುನ್ನವೇ ಮತ್ತೆ ಕಾರವಾರದಲ್ಲಿ ದೇವಾಲಯಗಳ ಸರಣಿ ಕಳ್ಳತನ ನಡೆದಿದೆ.

ನಗರದ ಕೋಡಿಭಾಗ ಸಮೀಪ ರಾ ಹೆದ್ದಾರಿ ಪಕ್ಕದಲ್ಲಿರುವ ಕಾಪ್ರಿ ದೇವಸ್ಥಾನದಲ್ಲಿ ಕಳ್ಳರು ಕಳ್ಳತನ ನಡೆಸಿದ್ದಾರೆ. ರಾತ್ರಿ ಮೂರು ಗಂಟೆ ಅವಧಿಯೊಳಗೆ ಕಳ್ಳರು ಕೃತ್ಯ ಎಸಗಿದ್ದಾರೆ. ದೇವಸ್ಥಾನದ ಹೊರ ಬದಿಯ ಕಾಣಿಕೆ ಡಬ್ಬವನ್ನು ಒಡೆದ ಕಳ್ಳರು ನೂರು, ಐನೂರು ರೂಪಾಯಿ ನೋಟ್ ನ್ನ ಏಗರಿಸಿದ್ದಾರೆ. ಅದೇ ರೀತಿ ದೇವಾಲಯದ ಬಾಗಿಲಿನ ಬೀಗ ಒಡೆದು ಒಳಗಡೆಯ ಕಾಣಿಕೆ ಡಬ್ಬದ ಬೀಗ ಮುರಿದು ನಾಣ್ಯ ಮತ್ತು ಐವತ್ತು ರೂಪಾಯಿ ನೋಟ್ ಬಿಟ್ಟು ಉಳಿದೆಲ್ಲವನ್ನು ಕದ್ದಿದ್ದಾರೆ . ಮತ್ತು ಇನ್ನೊಂದು ಕಾಣಿಕೆ ಡಬ್ಬಿಯ ಲಾಕ್ ನ್ನ ಓಪನ್ ಮಾಡಿ ಹಣ ಕದ್ದಿದ್ದಾರೆ

ಕಾಪ್ರಿ ದೇವರ ಗರ್ಭ ಗುಡಿಯಲ್ಲಿದ್ದ ದೇವರ ಮೈಮೇಲಿನ ಬಂಗಾರ ಕದಿಯುವ ಪ್ರಯತ್ನ ಮಾಡಿದರಾದರು ಸಾಧ್ಯವಾಗಿಲ್ಲ

ಕಾರವಾರ ನಗರ ಠಾಣೆ(KARWAR TOWN STATION) ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದು,ತನಿಖೆ ನಡೆಸಲಾಗಿದೆ.

ತಾಲೂಕಿನ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದೇವಾಲಯಗಳ ಕಳ್ಳತನಕ್ಕೆ ಪ್ರಯತ್ನ ನಡೆಸಲಾಗಿದೆ. ಎರಡುವರೆ ತಿಂಗಳ ಹಿಂದೆ ಅಮದಳ್ಳಿಯ ಕಳ್ಳತನ ನಡೆದು ದೇವರ ಆಭರಣಗಳು ಕಳ್ಳತನವಾಗಿತ್ತು. ಆದರೆ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಇದನ್ನು ಓದಿ : ಅಲೆಗೆ ಅಪ್ಪಳಿಸಿದ ಬೋಟ್

ಮದ್ಯ ಚರಂಡಿ ಪಾಲು

ಅಡಿಕೆ ಕಳ್ಳರ ಬಂಧನ

ಮಾತು ಉಳಿಸಿಕೊಂಡ ಸಚಿವ ಮಂಕಾಳ್ ವೈದ್ಯ