ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾಸನ :  ಹಾಸನಾಂಬ ದೇವಾಲಯದ (Hasanamba temple) ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿ (Shri siddeshwar Swami) ವೈಭವದ ಜಾತ್ರಾ ಮಹೋತ್ಸವದ ಕೊಂಡೋತ್ಸವದಲ್ಲಿ ಶಾಸಕ ಸ್ವರೂಪ್ ಪ್ರಕಾಶ್(MLA Swaroop Prakash), ಕೆಂಡ ಹಾಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ನೂರಾರು ಭಕ್ತರು ಕೆಂಡ ಹಾಯ್ದು ಭಕ್ತಿ ಪ್ರದರ್ಶಿಸಿದರು.  ದೇವಾಲಯದ ಅರ್ಚಕ ಪ್ರಕಾಶ್ ಅವರೊಂದಿಗೆ ಶಾಸಕ ಸ್ವರೂಪ್ ಪ್ರಕಾಶ್ ಕೆಂಡ ಹಾಯ್ದರು.

ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಅದ್ದೂರಿಯಿಂದ ಉತ್ಸವ ಸಂಪನ್ನಗೊಂಡಿತು. ನಿನ್ನೆ ರಾತ್ರಿ ಹತ್ತು ಗಂಟೆಗೆ ಆರಂಭವಾದ ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ (Shri Veerabhadreshwar) ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಜಾನೆ ಐದು ಗಂಟೆಗೆ ದೇವಾಲಯಕ್ಕೆ ಮರಳಿತು. ಬಳಿಕ ದೇವಾಲಯದ ಎದುರು ನಡೆದ ಕೊಂಡೋತ್ಸವದಲ್ಲಿ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಇದನ್ನು ಓದಿ : ಮೀನು ಹಿಡಿಯಲು ತೆರಳಿದ ವ್ಯಕ್ತಿ ಸಾವು.

ಮೊಬೈಲ್ ಹಿಡಿದು ಅಡುಗೆ ಮಾಡುವವರೇ ಹುಷಾರ್

ವಕ್ಫ ಜಮೀನು ವಿವಾದ ಉಲ್ಬಣ ಸಾಧ್ಯತೆ. ಸಿಎಂ ಸಭೆ

ಅಕ್ರಮ ಜಾನುವಾರು ಸಾಗಿಸುತ್ತಿದ್ದ ಲಾರಿ ಅಪಘಾತ