ಬೆಂಗಳೂರು(BANGLORE) : ಸನ್ನದುದಾರರಿಂದ ಅಕ್ರಮ ಲೈಸೆನ್ಸ್, ವಿಪರೀತ ಲಂಚ() ಸೇರಿದಂತೆ ಅಬಕಾರಿ ಇಲಾಖೆಯಲ್ಲಿ ಆಗುವ ಭಾರಿ ಭ್ರಷ್ಟಾಚಾರವನ್ನು (Corruption) ವಿರೋಧಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ (Federation of wine merchants association) ನೇತೃತ್ವದಲ್ಲಿ ಮದ್ಯ ಸನ್ನದುದಾರರು ರಾಜ್ಯಾದ್ಯಂತ ನವೆಂಬರ್ 20ರಂದು ಮದ್ಯದಂಗಡಿ ಬಂದ್ (Liquor shop close) ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಅಬಕಾರಿ ಇಲಾಖೆಯಲ್ಲಿನ (Exice Department) ಅಧಿಕಾರಿಗಳ ಮತ್ತು ರಾಜ್ಯ ಅಬಕಾರಿ ಸಚಿವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ (Karnataka wine merchant association) ಇದೀಗ ರಾಜಭವನ(Rajbhavan), ಮುಖ್ಯಮಂತ್ರಿ(CM) ಮತ್ತು ಲೋಕಾಯುಕ್ತರಿಗೆ(Lokayukta) ಪತ್ರ ಬರೆದು ತಿಳಿಸಿದೆ.
ಅಬಕಾರಿ ಸಚಿವರು(Exice Minister) ಮತ್ತು ಅವರ ಕಚೇರಿಯು ದುರ್ನಡತೆ ಮತ್ತು ಸುಲಿಗೆಯಲ್ಲಿ ತೊಡಗಿದೆ ಎಂದು ಆರೋಪಿಸಿದ ಸಂಘ ಇಲಾಖೆ ಅಧಿಕಾರಿಗಳ ವರ್ಗಾವಣೆಗೆ ಅನುಮೋದನೆ ನೀಡಲು ಸಚಿವರು ಹಾಗೂ ಅಧಿಕಾರಿಗಳು ಮದ್ಯದಂಗಡಿಯಿಂದ ಬಹಿರಂಗವಾಗಿ ಹಣ ಪಡೆಯುತ್ತಿದ್ದಾರೆ ಎಂದು ಪತ್ರದಲ್ಲಿ ಗಂಭೀರವಾಗಿ ಉಲ್ಲೇಖಿಸಿದ್ದಾರೆ. ಅಬಕಾರಿ ಅಧಿಕಾರಿಗಳನ್ನು ವರ್ಗಾವಣೆ(Transfers) ಮಾಡುವಲ್ಲಿ ಮತ್ತು ಅಬಕಾರಿ ಅಧಿಕಾರಿಯಿಂದ ಚುನಾವಣಾ ಉದ್ದೇಶಕ್ಕಾಗಿ(Election Purpose) ಅಕ್ರಮವಾಗಿ ಹಣ ವಸೂಲಿ ಮಾಡುವಲ್ಲಿ ಅಬಕಾರಿ ಸಚಿವರ ಕಛೇರಿ ಬೆಂಗಳೂರಿನಲ್ಲಿ ಭಾರೀ ಲಂಚ ಮತ್ತು ಅಕ್ರಮ ಹಣ ವರ್ಗಾವಣೆ (Illegal money transfer) ನಡೆದಿದೆ. ಹಿರಿಯ ಅಧಿಕಾರಿಗಳಿಂದ ವರ್ಗಾವಣೆಗಾಗಿ 16 ಕೋಟಿ ರೂ.ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹಿರಿಯ ಅಧಿಕಾರಿಗಳಲ್ಲಿ ಮೂವರು ಜಿಲ್ಲಾಧಿಕಾರಿಗಳು, ಒಂಬತ್ತು ಅಧೀಕ್ಷಕರು, 13 ಅಬಕಾರಿ ಉಪ ಅಧೀಕ್ಷಕರು ಮತ್ತು 20 ಅಬಕಾರಿ ನಿರೀಕ್ಷಕರು ಸೇರಿದ್ದಾರೆ. ಕಳೆದ ಎರಡುಮೂರು ವರ್ಷಗಳಿಂದ ವರ್ಗಾವಣೆಗೆ ಇಲಾಖೆಯಲ್ಲಿ ಹಣ ದಂಧೆ ನಡೆಯುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
CL7 ಬಾರ್ ಲೈಸೆನ್ಸ್‌ಗಳನ್ನು(Bar License) ಸಚಿವರು 30-70 ಲಕ್ಷ ರೂಪಾಯಿಗಳ ನಡುವೆ ಲಂಚದಲ್ಲಿ ನೀಡಿದ್ದಾರೆ, ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಆರೋಪಿಸಿದೆ. ಕಳೆದ ಒಂದು ವರ್ಷದಲ್ಲಿ ಅಬಕಾರಿ ಸಚಿವರು 1,000 ಅಕ್ರಮ ಪರವಾನಗಿ ನೀಡಿದ್ದು, 300-700 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಇದನ್ನು ಓದಿ : ಮನೆಯಿಂದ ಕಣ್ಮರೆಯಾಗಿದ್ದ ಬಾಲಕ ಪತ್ತೆ
ಶಿರಸಿಯಲ್ಲಿ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ