ಕಾರವಾರ(KARWAR): ಹಬ್ಬು ಬ್ರಾಹ್ಮಣ(HABBU BRAHMANA) ಸಮಾಜದ 23-24ನೇ ಸಾಲಿನ ವಾರ್ಷಿಕ ಮಹಾಸಭೆ ಮಿತ್ರಾನಂದ ಪ್ರಯಾಗ ಅವರ ನಿರ್ದೇಶನದಲ್ಲಿ ಇತ್ತೀಚಿಗೆ ನಡೆಯಿತು.
ಸಂಘದ ಅಧ್ಯಕ್ಷರಾದ ಯಶೋಧಾ ಮದನ ಹಬ್ಬು ಅವರು ಪ್ರಾಸ್ತಾವಿಕ ಮಾತನಾಡಿ, ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಹಬ್ಬು ಸಮಾಜದ ಎಲ್ಲ ಸದಸ್ಯರು ಸಭೆಗೆ ಹಾಜರಾಗಿ ಸಮಾಜದ ಶ್ರೇಯೋಭಿವೃದ್ಧಿ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಬೇಕು. ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಸಂಘದ ಹಿರಿಯರಾದ ಶಂಕರ ಹಬ್ಬು, ಸಾಹಿತಿ ಮೋಹನ ಹಬ್ಬು, ಮದನ ಹಬ್ಬು, ಸುಭೋದ ಹಬ್ಬು, ರಾಜೇಂದ್ರ ಹಬ್ಬು , ಅರುಣ ಹಬ್ಬು, ಮಾಲಿನಿ ಹಬ್ಬು ತಮ್ಮ ಸಲಹೆ ನೀಡಿದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ. ಅಭಿಷೇಕ, ಪ್ರಯಾಗ, ಡಾ. ಅಮಿತ್ ಕುಮಾರ್ ಆರೋಗ್ಯ ತಪಾಸಣೆ ನಡೆಸಿದರು. ದಯಾನಂದ ಹಬ್ಬು, ಸತೀಶ ಹಬ್ಬು, ರಜತ ಹಬ್ಬು, ಸಂಜಯ ಹಬ್ಬು, ಸಂತೋಷ ಹಬ್ಬು, ಜಯಶ್ರೀ, ಸರೋಜಾ ಹಬ್ಬು ಸಹಕರಿಸಿದರು. ಗಣೇಶ ಹಬ್ಬು ವರದಿ ಓದಿದರು. ದೀಪಾ, ಶುಭಾಂಗಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಡಾ. ಅಭಿಷೇಕ ಪ್ರಯಾಗ ಸ್ವಾಗತಿಸಿದರು. ಅರುಣ ಕುಮಾರ ಹಬ್ಬು ವಂದಿಸಿದರು.
ದಿನೇಶ ಹಾಗೂ ಮಿತ್ರಾನಂದ ಹಬ್ಬು ಕುಟುಂಬದವರು ತಮ್ಮ ನಿವೇಶನದಲ್ಲಿ ಸಭೆ ನಡೆಸಲು ಸಹಕರಿಸಿದರು. ಗಣೇಶ ಹಬ್ಬು, ಶೀತಲ ಹಬ್ಬು ವಿವಿಧ ನಾಣ್ಯ ಸಂಗ್ರಹವನ್ನು ಪ್ರದರ್ಶಿಸಿದರು.
ಇದನ್ನು ಓದಿ : ಗಾಂಜಾ ಸೇವನೆ. ಮೂವರ ಬಂಧನ

