ಶಿರಸಿ (sirsi): ಅಕ್ರಮವಾಗಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿದ ಘಟನೆ ನಡೆದಿದೆ.
ನಗರದ ಆನೆಹೊಂಡದ ಕಟ್ಟಿಗೆ ಡಿಪೊ ಹತ್ತಿರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ರಾಜೀವ್ ನಗರದ ಆನಂದ ಹನುಮಂತ ವಡ್ಡರ (21), ದೇವಿಕೆರೆಯ ಕಿಶನ್ ನಾರಾಯಣ್ ಹರಿಜನ (22 ) ಎಂಬುವವರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ದಾಳಿ ಮುಂದುವರೆಸಿದ ಪೊಲೀಸರು ಇಂದು ಗಾಂಜಾ ಸೇವನೆ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ. ಶಿರಸಿ ನಗರದ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ
ಕೆ.ಎಚ್.ಬಿ ಕಾಲೋನಿ ನಿವಾಸಿ ಮಂಜುನಾಥ ಮಾರುತಿ ಪೂಜಾರಿ (25) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನದಲ್ಲಿ ಸಿಪಿಆಯ್ ಶಶಿಕಾಂತ ವರ್ಮಾ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ನಾಗಪ್ಪ ಬಿ, ಸಿಬ್ಬಂದಿಗಳಾದ ಹನುಮಂತ ಕಬಾಡಿ, ಅರುಣ ಲಮಾಣಿ, ಮಂಜುನಾಥ ಕಾಶಿಕೋವಿ, ಶಿವಲಿಂಗ ತುಪ್ಪದ, ವಿಶ್ವನಾಥ ಭಂಡಾರಿ, ತುಕಾರಾಮ ಲಮಾಣಿ, ಮಲ್ಲಿಕಾರ್ಜುನ ಕುದರಿ ಭಾಗವಹಿಸಿದ್ದರು.
ಇದನ್ನು ಓದಿ : ಹೆದ್ದಾರಿ ಮಧ್ಯೆ ಸುಟ್ಟು ಭಸ್ಮವಾದ ಬಿಎಂಡಬ್ಲೂ ಕಾರು