ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕುಮಟಾ(Kumta) : ತಾಲೂಕಿಗೆ ಹೊಂದಿಕೊಂಡಿರುವ ಗಂಗಾವಳಿ ಸೇತುವೆಯ()Gangavali Bridge) ತಳಭಾಗದಲ್ಲಿ ವ್ಯಕ್ತಿಯೋರ್ವನ ಮೃತದೇಹದ ಪತ್ತೆಯಾಗಿದೆ.

ಮೃತರನ್ನು ಮಾದನಗೇರಿ(Madanageri) ಹೊಸನಗರದ ಮಂಜು ರಾಮಾ ಹರಿಕಂತ್ರ (35) ಎಂದು ಗುರುತಿಸಲಾಗಿದೆ. ಮಂಜು ಹರಿಕಂತ್ರ ಅವರು ಬುಧವಾರದಂದು ಮೀನಿಗೆ ಗಾಳ ಹಾಕಲು ಹೋಗುವುದಾಗಿ ಮನೆಯವರಿಗೆ ತಿಳಿಸಿ ಮನೆಯಿಂದ ತೆರಳಿದ್ದರು ಎನ್ನಲಾಗಿದೆ.
ಬಳಿಕ ಅವರು ನಾಪತ್ತೆಯಾಗಿದ್ದರು. ಗಾಳ ಹಾಕುವ ವೇಳೆ ಆಕಸ್ಮಿಕವಾಗಿ ನದಿಗೆ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶುಕ್ರವಾರ ಬೆಳಗ್ಗೆ ಗಂಗಾವಳಿ ಸೇತುವೆಯ(Gangavali) ತಳಭಾಗದ ನದಿ ದಡಕ್ಕೆ ಮೃತದೇಹ ತೇಲಿ ಬಂದಿರುವುದು ಸ್ಥಳೀಯರ ಗಮನಕ್ಕೆ ಬಂದಿತ್ತು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಘಟನೆ ಕುರಿತು ಗೋಕರ್ಣ ಪೊಲೀಸರು(Gokarn Police) ತನಿಖೆ ಮುಂದುವರಿಸಿದ್ದಾರೆ.