ಕುಮಟಾ(KUMTA) : ಎಐಸಿಸಿ (AICC) ಮಾಜಿ ಅಧ್ಯಕ್ಷ ಹಾಗೂ  ಸಂಸತ್ತಿನ ಲೋಕಸಭೆಯ ವಿರೋಧ ಪಕ್ಷದ ನಾಯಕ  ರಾಹುಲ್ ಗಾಂಧೀ ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್ (POST) ಮಾಡಿದ ಫೇಸ್ಬುಕ್ (FACEBOOK) ಖಾತೆದಾರರೋರ್ವರ ಮೇಲೆ ಪ್ರಕರಣ ದಾಖಲಾಗಿದೆ.

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ (CONGRESS) ಉಪಾಧ್ಯಕ್ಷ ರಾಮಚಂದ್ರ ಹೊನ್ನಯ್ಯ ನಾಯ್ಕ ಎಂಬುವವರು  ನಂದಿನಿ ಭಂಡಾರ್ಕರ್ (Nandini Bhandarkar) ಎನ್ನುವ ಹೆಸರಿನ ಬೆಂಗಳೂರು ಮಹಿಳೆಯ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ  (KUMTA POLICE STATION) ದೂರು ದಾಖಲಿಸಿದ್ದಾರೆ.

ನಂದಿನಿ ಭಂಡಾರಕರ್ ಹೆಸರಿನ ಮಹಿಳೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಕರೆಂಟ್ ಸಿಟಿ ಬೆಂಗಳೂರು, ಹೋಂ ಟೌನ್ ಬೆಂಗಳೂರು (BANGLORE), ಉದ್ಯೋಗ ಸೆಲ್ಪ ಎಂಪ್ಲಾಯ್ಕೆಂಟ್ ಎಂದು ದಾಖಲಿಕೊಂಡಿದ್ದಾರೆ.   ಆರು ದಿನದ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ಸಂಸತ್ತಿನ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧೀಜಿ ಯವರ ಭಾವಚಿತ್ರದ ಮುಖದ ಭಾಗದ ಮೇಲೆ ಚಪ್ಪಲಿಯ ಚಿತ್ರವನ್ನು ಇಟ್ಟು ರಾಹುಲ್ ಗಾಂಧಿಯವರ ಗೌರವಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಗೌರವಕ್ಕೆ ಚ್ಯುತಿ ಬರುವಂತೆ ಮಾಡಿದ್ದಾರೆ. ದೇಶದ ಕೋಟಿ, ಕೋಟಿ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗೆ ಘಾಸಿ ಆಗುವ ರೀತಿಯಲ್ಲಿ ಜನತೆಯಲ್ಲಿ ದ್ವೇಷ ಹುಟ್ಟಿಸುವ ಹೀಯಾಳಿಸುವ,ಅಸಂಬಂಧವಾದ ಚಿತ್ರವನ್ನು ಮತ್ತು ಆ ಚಿತ್ರದ ಕೆಳಗಡೆ, ಈ ಕೆಳಗಿನಂತೆ ಜನತೆಯಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಸಮಾಜದಲ್ಲಿ ಅಶಾಂತಿ, ಕೋಮು ಗಲಭೆ (COMMUNAL) ಸೃಷ್ಟಿಯಾಗುವಂತಹ ಒಕ್ಕಣಿಕೆ ಬರೆದು ತನ್ನ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಪೋಸ್ಟ್ ಮಾಡಿರುತ್ತಾಳೆ ಎಂದು ದೂರಲಾಗಿದೆ.

3.4k ಫಾಲೋವರ್ಸ್ (FOLLOWERS) ಹೊಂದಿರುವ ಇವಳ ಫೇಸ್ಬುಕ್ ಖಾತೆಯ ಪೋಸ್ಟಿನಲ್ಲಿ ಒಕ್ಕಣಿಕೆ ಬರೆಯಲಾಗಿದೆ.
ನಮ್ಮ ಸಂವಿಧಾನದಂತೆ ಜಾತ್ಯತೀತ ಮನೋಭಾವ ದೊಂದಿಗೆ ನಾವೆಲ್ಲರೂ ಬದುಕುತ್ತಿರುವ ಈ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವ ಪ್ರಚೋದನಕಾರಿ ಬರವಣಿಗೆ ಹಾಗೂ ರಾಹುಲ್ ಗಾಂಧಿ ಅವರ ಚಿತ್ರ ಇರುವ ಅವರ ಮುಖದ ಮೇಲೆ ಚಪ್ಪಲಿಯನ್ನು ಇಟ್ಟು ಚಿತ್ರವನ್ನು ಸಾಮಾಜಿಕ ಜಾಲತಾಣದ ತನ್ನದೇ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಮಾನಹಾನಿ ಮಾಡಿ ಅಗೌರವಿಸಿರುವ ನಂದಿನಿ (NANDINI) ಭಂಡಾರ್ಕರ್ ಎನ್ನುವ ಮಹಿಳೆಯ ಮೇಲೆ ಎಫ್ ಆಯ್ ಆರ್ ದಾಖಲಿಸಿ ತಕ್ಷಣ ಅವಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.