ಹೊನ್ನಾವರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ (KAGERI) ಗೆಲ್ಲುತ್ತಿದ್ದಂತೆ ತಮ್ಮ ಒಳಗಿನ ಆಕ್ರೋಶವನ್ನ ಒಂದೊಂದಾಗಿ ಹೊರ ಹಾಕುತ್ತಿದ್ದಾರೆ.
ಹೊನ್ನಾವರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ (JDS) ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಅವರು ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದಿನ ಎಂ ಪಿ ಎಲೆಕ್ಷನ್ (MP ELECTION) ಲ್ಲಿ ಬಿಜೆಪಿ ವಿರುದ್ಧ ಅಂದ್ರೆ ಅನಂತಕುಮಾರ ಹೆಗಡೆ (ANANTAKUMAR HEGDE) ವಿರುದ್ಧ ಡಮ್ಮಿ ಕ್ಯಾಂಡಿಡೆಟ್‌ನ್ನು ನಿಲ್ಲಿಸಿದ್ದರು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಬಗ್ಗೆ ಮಾತಾಡಿದ್ದಾರೆ. ಹೀಗಾಗಿ ಅಸ್ನೋಟಿಕರ್ (ASNOTIKAR) ಜನ ಬೆಂಬಲವಿರದ ಒಬ್ಬ ವ್ಯಕ್ತಿ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನೋಟಾ (NOTA) ಚಲಾಯಿಸಿ, ಅಭಿಯಾನ ಆರಂಭಿಸಿ, ಜನರ ಮನಸ್ಸನ್ನು ವಿಚಲಿತರನ್ನಾಗಿ ಮಾಡುವ ಪಕ್ಷ ವಿರೋಧಿಗಳು ಹುನ್ನಾರ ನಡೆಸಿದ್ದರು. ಅದು ಪ್ರಯೋಜನವಾಗಲಿಲ್ಲ. ನಮ್ಮ ಕ್ಷೇತ್ರದಲ್ಲಿ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಡಮ್ಮಿ ಕ್ಯಾಂಡಿಡೇಟ್ (Dummy CANDIDATE) ಹಾಕಿದ್ದರಿಂದ ಬಿಜೆಪಿ (BJP) ಅಭ್ಯರ್ಥಿ ಹೆಚ್ಚು ಮತಗಳನ್ನು ತೆಗೆದುಕೊಂಡಿದ್ದಾರೆ ಅಷ್ಟೇ ಬೇರೇನಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅತಿಹೆಚ್ಚು ಮತ ಪಡೆದ ದಾಖಲೆ ನನಗೇ ಸಲ್ಲುತ್ತದೆ’ ಎಂದು ಅನಂತಕುಮಾರ ಹೆಗಡೆ ಹಾಗೂ ಅವರ ಬೆಂಬಲಿಗರನ್ನ ಕಾಗೇರಿ ಕೆಣಕಿದಂತಿದೆ.
ಈ ಲೋಕಸಭಾ (LOKASABHA) ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಕಾಗೇರಿಗೆ ಸಾಥ್ ನೀಡಿದ್ದಾರೆ. ಆದರೆ ಆನಂದ ಅನ್ನೋಟಿಕರ್ ಮಾತ್ರ ಕಾಗೇರಿ ಪರ ಪ್ರಚಾರಕ್ಕೆ ಬಾರದಿರುವ ಬಗ್ಗೆ ತಮ್ಮ ಅಂತರಂಗದ ಅಭಿಪ್ರಾಯವನ್ನ ಹೊರ ಹಾಕಿದ್ದಾರೆ. ವೇದಿಕೆಯಲ್ಲಿ ಕಾಗೇರಿ ಅವರು ಅನಂತ್ ಮತ್ತು ಆನಂದ್ ಇಬ್ಬರನ್ನ ಜರಿದಿದ್ದಾರೆ.
ಈ ವೇಳೆ ಮಾಜಿ ಸಚಿವ ಶಿವಾನಂದ ನಾಯ್ಕ, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ ನಾಯ್ಕ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್.ಹೆಗಡೆ, ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ ಹಾಗೂ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.