ಅಂಕೋಲಾ : ಗಂಗಾವಳಿ(GANGAVALI) ನದಿಯ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಮೂರು ಸ್ಪಾಟ್ ಸಿಕ್ಕಿದೆ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ (MAJOR GENERAL INDRABALAN) ಹೇಳಿದ್ದಾರೆ.
ಗುರುವಾರ ಸಂಜೆ ಕಾರ್ಯಾಚರಣೆ ನಡುವೆ ಕೊಂಚ ವಿರಾಮದ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇಂದಿನ ಕಾರ್ಯಾಚರಣೆ ಸಂದರ್ಭದಲ್ಲಿ ದ್ರೋಣ್ (DRONE) ಮೂಲಕ ಕೇರಳದ ಅರ್ಜುನ್ ಸೇರಿ ಇತರರ ಗುರುತು ಪತ್ತೆಗಾಗಿ ಶೋಧ ನಡೆಸಲಾಗಿತ್ತು. ಈ ವೇಳೆ ನದಿಯಲ್ಲಿ ಒಂದು ರೆಲಿಂಗ್, ಒಂದು ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಕಾಣಿಸುತ್ತಿದೆ. ಒಟ್ಟು 3 ಸ್ಪಾಟ್‌ಗಳು ಸಿಕ್ಕಿದ್ದು, ಅದರ ಪೈಕಿ ಅರ್ಜುನ್ ಲಾರಿ ಯಾವುದು ಎಂದು ತಿಳಿದುಕೊಳ್ಳಬೇಕಾಗಿದೆ.
ಹೆದ್ದಾರಿಯಿಂದ ಸುಮಾರು 60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಮೆಟಲ್ ಡಿಟೆಕ್ಟ್ ಆಗಿದೆ. ಭಾರತ್ ಬೆಂಜ್ (BHARAT BENZ) ವಾಹನದಲ್ಲಿದ್ದ ನಾಟ ತುಂಡುಗಳೆರಡು 12 ಕೀಮೀ. ದೂರದ ಅಗ್ರಗೋಣದಲ್ಲಿ ಮರದ ದಿಮ್ಮಿಗಳು ಸಿಕ್ಕಿದೆ.
ನಾಲ್ಕರಲ್ಲಿ 2 ಸ್ಪಾಟ್‌ಗಳ ಪೈಕಿ ಲಾರಿ ಯಾವುದು ಎಂದು ನೋಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಇಂದ್ರಬಾಲನ್, ತುಂಬಾ ಆಳದಲ್ಲಿರುವ ಸ್ಪಾಟ್ ನಲ್ಲಿ ಲಾರಿ ಇರಬಹುದು ಎಂದು ಊಹಿಸಲಾಗಿದೆ.
ಟ್ರಕ್ ಕ್ಯಾಬಿನ್ ಒಳಗೆ ಅರ್ಜುನ್ ಇರೋ ಸಾಧ್ಯತೆಯಿದೆ. ನದಿಯ ನೀರಿನ ಹರಿವಿನ ವೇಗ 8 ನಾಟ್ಸ್ ಸ್ಪೀಡ್ ಇದೆ. ಡೀಪ್ ಡೈವರ್ಸ್‌ಗಳಿಗೆ ಅಲ್ಲಿ ಹೋಗಿ ಪತ್ತೆ ಮಾಡುವುದು ಭಾರಿ ಕಷ್ಟವಾಗುತ್ತಿದೆ. ನೇವಿ ಡೈವರ್ಸ್ ಪ್ರಕಾರ ಗರಿಷ್ಟ 3 ನಾಟ್ಸ್ ನಲ್ಲಿ ಡೀಪ್ ಡೈವರ್ಸ್ ಕಾರ್ಯಾಚರಣೆ ಮಾಡಬಹುದು. ನದಿಯ ನೀರಿನ ಹರಿವು ಕಡಿಮೆ ಆಗೊವರೆಗೂ ಡೀಪ್ ಡೈವರ್ಸ್ ಕಾರ್ಯಾಚರಣೆ ಮಾಡುವುದು ಕಷ್ಟವಾಗಲಿದೆ ಎಂದರು.