ದಾಂಡೇಲಿ (DANDELI):  ಕುಸಿದ ಸೇತುವೇಯೊಳಗೆ (COLLAPSE BRIDGE) ಬಿದ್ದು  ದ್ವಿಚಕ್ರ  ದ್ವಿಚಕ್ರ ವಾಹನ ಸವಾರರು  ಗಂಭೀರ ಗಾಯಗೊಂಡ ಘಟನೆ ದಾಂಡೇಲಿಯ ಗಾಂಧಿನಗರದಲ್ಲಿ (GANDHINAGAR) ಸಂಭವಿಸಿದೆ.

ಕಂಜಾರಭಾಟ್ ನಿವಾಸಿಗಳಾದ ಕದಂ ಲಕ್ಷ್ಮಣ ಕಂಜಾರಭಾಟ್ ಹಾಗೂ ಅವರ ಪತ್ನಿ ಶಾಂತಾ ಕದಂ ಕಂಜಾರಭಾಟ್ ಗಾಯಗೊಂಡವರು. ನಗರದಿಂದ ಗಾಂಧಿನಗರಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಮೊದಲೇ ಕುಸಿದು ಬಿದ್ದಿರುವ ಕಿರು ಸೇತುವೆಯ ಬದಿಯಲ್ಲಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ  ಬಿದ್ದ ಪರಿಣಾಮವಾಗಿ ಇಬ್ಬರಿಗೂ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸಾರ್ವಜನಿಕ ಆಸ್ಪತ್ರೆಗೆ ಸ್ಥಳೀಯ ನಗರಸಭಾ ಸದಸ್ಯೆ ರುಕ್ಮಿಣಿ ಬಾಗಡೆ, ಸ್ಥಳೀಯ ಯುವ ಮುಖಂಡ ಸುಮಿತ್ ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಕಳೆದ ಒಂದು ವರ್ಷಗಳ ಹಿಂದೆಯೇ ಇಲ್ಲಿ ಕಿರು ಸೇತುವೆ ಕುಸಿದು ಬಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಸೇತುವೆಯ ಎರಡು ಬದಿಯಲ್ಲಿ ದ್ವಿಚಕ್ರ ವಾಹನ ಸಂಚರಿಸಲು ಅವಕಾಶವಿದ್ದರೂ, ಅದು ಈ ರೀತಿಯ ಅನಾಹುತಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿಯ ಕಿರು ಸೇತುವೆಯ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಗಂಗಾವಳಿಯಲ್ಲಿ ಈಶ್ವರ್ ಮಲ್ಪೆ ಹುಡುಕಾಟ

ಕಸ ಹೆಕ್ಕಿದ ಜಿಲ್ಲಾಧಿಕಾರಿ

ಅಂತರಜಿಲ್ಲಾ ಕಳ್ಳರ ಬಂಧನ