ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news). ವಿಜಯನಗರ(Vijayanagara) : ಬಸ್ ನಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯೊಬ್ಬರನ್ನು ಆಲೂರು ಸರ್ಕಾರಿ(Aluru Hospital) ಆಸ್ಪತ್ರೆಗೆ ದಾಖಲಿಸುವ ಮೂಲಕ ಸಾರಿಗೆ ಚಾಲಕ, ನಿರ್ವಾಹಕರು ಸಮಯ ಪ್ರಜ್ಞೆ ಮೆರೆದ ಮಾನವೀಯತೆ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿಯಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ(Gangavati) ಕಾರಟಗಿಯ ಸುಲ್ತಾನ್ ಬಿ ಎನ್ನುವ ಮಹಿಳೆಯ ಆಪರೇಷನ್ ಆದ ತನ್ನ ಪತಿಯನ್ನು ನೋಡಿಕೊಂಡು ಬರಲು ತೆರಳಿದ್ದಳು. ಬೆಂಗಳೂರಿನಿಂದ ಹುನಗುಂದ ಡಿಪೋದ ಬಸ್ಸಿನಲ್ಲಿ ಒಬ್ಬಳೇ ವಾಪಸ್ಸಾಗುವ ಸಂದರ್ಭದಲ್ಲಿ ದೊಣ್ಣೆಹಳ್ಳಿ ಬಳಿ ಅವರಿಗೆ ಹೆರಿಗೆ ನೋವು(Delivari Pain) ಕಾಣಿಸಿಕೊಂಡಿದೆ. ಸಹ ಪ್ರಯಣಿಕ ಮಹಿಳೆ ನಾಗವೇಣಿ ಎನ್ನುವರು ಗಮನಿಸಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರಿಗೆ ವಿಷಯ ತಿಳಿಸಿದ್ದಾಳೆ.
ಹೆದ್ದಾರಿ ಗಸ್ತು ಪೊಲೀಸರ(Highway Petrol Police) ನೆರವಿನೊಂದಿಗೆ ಸಾರಿಗೆ ಬಸ್ ಚಾಲಕ ನಾಗರಾಜ್ ವರಕ್ಲಹಳ್ಳಿ, ನಿರ್ವಾಹಕ ಗುಂಡಿ ಎಂಬುವರು ಇಳಕಲ್ ಬಸ್ ನ್ನು ಕೂಡಲೇ ಹೆದ್ದಾರಿ ಸಮೀಪದಲ್ಲಿದ್ದ ಆಲೂರು ಸರ್ಕಾರಿ ಆಸ್ಪತ್ರೆ ಬಳಿಗೆ ಕರೆತಂದು, ಆಸ್ಪತ್ರೆಯಲ್ಲಿದ್ದ ನರ್ಸಗಳಾದ ಶಿಲ್ಪಾ ,ಶಶಿಕಲಾ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಹೆಣ್ಣು ಮಗು ಜನನವಾಗಿದ್ದು ತಾಯಿ, ಮಗು ಕ್ಷೇಮವಾಗಿದ್ದಾರೆ.
ಇದನ್ನು ಓದಿ : ಕಪಿ ಚೇಷ್ಟೆಗೆ ಜಪ್ಪೆನ್ನದ ಬಾಲಕ.
ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರ್ ಎಸ್ ಎಸ್ ಪಥ ಸಂಚಲನ
ಅಂಗನವಾಡಿಗೆ ಶೌಚಾಲಯ ಗುಂಡಿ ನಿರ್ಮಿಸಿಕೊಟ್ಟ ಮಾಸ್ತಪಣ್ಣ