ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿರಸಿ(Sirsi) : ಉತ್ತರಕನ್ನಡ(Uttarakannada) ಜಿಲ್ಲೆಯ ಶಿರಸಿ ನಗರದಲ್ಲಿ(Sirsi Town)  ನಡೆದ  ಆಯುರ್ವೇದ ವೈದ್ಯನ(Ayurveda Doctor) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಯುರ್ವೇದ ವೈದ್ಯ  ಡಾ. ರಮೇಶ ಕಲಗುಟ್ಕ‌ರ್ ಎಂಬಾತ ನ್ಯೂ ಕೆಎಚ್ಬಿ ಕಾಲೋನಿಯ(KHB Colony) ತಮ್ಮ ಮನೆಯಲ್ಲಿ ಹತ್ಯೆಯಾಗಿದ್ದ. ನಿನ್ನೆ ರಾತ್ರಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದರು.  ಹೀಗಾಗಿ ಶಿವಮೊಗ್ಗ(Shuvamogga) ಜಿಲ್ಲೆಯ ತೀರ್ಥಹಳ್ಳಿ ಮೂಲದ(Teerthalli Native) ಮಂಜುನಾಥ ಲಿಂಗಯ್ಯ ನಾಯ್ಕ (70) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

ಹಣ ಮತ್ತು ಬಂಗಾರದ(Money And Gold)  ಆಸೆಗಾಗಿ  ವೈದ್ಯನನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ(Primary Investigation) ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕೊಲೆಗೆ ಬಳಸಿದ ಆಯುಧ, ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಡಾ ರಮೇಶ ಕಲಗುಟ್ಕರ್ ಪತ್ನಿ ತೀರಿಹೋಗಿದ್ದು ಆಕೆಯ ತಂಗಿಯನ್ನ ಮದುವೆಯಾಗುವ ಸಿದ್ದತೆ(Marriage Preparation) ಮಾಡಿಕೊಂಡಿದ್ದ ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಆರೋಪಿ ಮಂಜುನಾಥ ವೈದ್ಯರ ಜೊತೆ ಸ್ನೇಹ ಬೆಳೆಸಿದ್ದ. ಅವರಲ್ಲಿ ಹಣ , ಬಂಗಾರ ಇದ್ದುದನ್ನ ಅರಿತು ಕೊಲೆ ಸಂಚು ರೂಪಿಸಿ   ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೀಪನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಗೀತಾ ಪಾಟೀಲ್, ಸಿಪಿಐಗಳಾದ ಶಶಿಕಾಂತ ವರ್ಮಾ, ರಮೇಶ್ ಹೂಗಾರ, ಪಿಎಸ್‌ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳ ತಂಡವೂ 24 ಗಂಟೆಯೊಳಗೆ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಶಿರಸಿ ನಗರದಲ್ಲಿ ನಡೆದ ಹತ್ಯೆ ಘಟನೆ ಬೆಚ್ಚಿ ಬೀಳಿಸಿದ್ದು‌ ಚರ್ಚೆಗೆ ಕಾರಣವಾಗಿತ್ತು. ಆರೋಪಿ ಬಂಧನದಿಂದಾಗಿ  ಒಂದು ಹಂತದಲ್ಲಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣ ಸಂಬಂಧ  ಪೊಲೀಸರು ತನಿಖೆ(Police Investigation) ಮುಂದುವರಿಸಿದ್ದಾರೆ.

ಇದನ್ನು ಓದಿ : ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ‌ಅಧ್ಯಕ್ಷರಾಗಿ ಪ್ರಶಾಂತ ತಾಂಡೇಲ, ಉಪಾಧ್ಯಕ್ಷರಾಗಿ ಪ್ರಮೋದ ಬಾನಾವಳಿಕರ ಅವಿರೋಧ ಆಯ್ಕೆ.

ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದ ವೈದ್ಯನ ಹತ್ಯೆ. ಶಿರಸಿಯಲ್ಲಿ ಬೆಚ್ಚಿ ಬೀಳಿಸಿದ ಘಟನೆ.