ಕುಂದಾಪುರ(KUNDAPUR): ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ವಾಹನ ಚಲಿಸುವಾಗ ತುಂಬಾ ಜಾಗೃತೆ ವಹಿಸೋದು ಉತ್ತಮ. ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೆದ್ದಾರಿಯಲ್ಲಿ ಯಾವಾಗ ಎಲ್ಲಿ ಜಾರಿ ಬೀಳುತ್ತೇವೋ ಗೊತ್ತಿಲ್ಲ.
ಕುಂದಾಪುರ ತಾಲೂಕಿನ ತೆಕ್ಕಟ್ಟೆಯಿಂದ ತ್ರಾಸಿವರೆಗೆ(TEKKATTE to TRASI) ರಾಷ್ಟ್ರೀಯ ಹೆದ್ದಾರಿ 66(NATIONAL HIGHWAY 66) ರಲ್ಲಿ ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದ್ದರಿಂದ ಹಲವು ದ್ವಿಚಕ್ರ ವಾಹನಗಳು ಜಾರಿ ಬಿದ್ದ ಘಟನೆ ನಡೆದಿದೆ.
ಗಣೇಶ ಚತುರ್ಥಿಯ(GANESH CHATURTHI) ದಿನ ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರೀ ಪ್ರಮಾಣದ ತೈಲ ಸೋರಿಕೆಯಾಗಿದೆ. ಮಂಗಳೂರುನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ತೈಲ ತುಂಬಿದ್ದ ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದೆ. ಪರಿಣಾಮವಾಗಿ ಕುಂದಾಪುರದಿಂದ ತ್ರಾಸಿವರೆಗೂ ರಸ್ತೆಯ ತುಂಬೆಲ್ಲಾ ತೈಲ ಬಿದ್ದಿದೆ. ಹೀಗಾಗಿ ವಾಹನ ಸವಾರರು ಅದರಲ್ಲಿ ದ್ವಿಚಕ್ರ ವಾಹನ ಸವಾರರು ಪಲ್ಟಿಯಾಗಿ ಬಿದ್ದಿದ್ದಾರೆ. ಹಬ್ಬದ ಸಂಭ್ರಮದಲ್ಲಿರುವ ನಾಗರಿಕರು ಹೆದ್ದಾರಿಯಲ್ಲಿ ಗಾಯ ಮಾಡಿಕೊಂಡರೆ, ವಾಹನಗಳು ಸಹ ಡ್ಯಾಮೇಜ್ ಆದ ಬಗ್ಗೆ ತಿಳಿದುಬಂದಿದೆ.
ವಿಷಯ ತಿಳಿದ ಪೊಲೀಸರು ಕೋಟ(KOTA), ಕುಂದಾಪುರ ಹಾಗೂ ಗಂಗೊಳ್ಳಿ(GANGOLLI) ಪೊಲೀಸರು ಎಲ್ಲಾ ಕಡೆ ಬ್ಯಾರೀಕೆಡ್ ಅಳವಡಿಸಿ ಹೆಚ್ಚಿನ ಅನಾಹುತ ಆಗೋದನ್ನ ತಪ್ಪಿಸಿ ಸವಾರರ ಪ್ರಾಣ ಉಳಿಸಿದ್ದಾರೆ. ಹೀಗಾಗಿ ಎಚ್ಚರ ವಹಿಸೋದು ಸೂಕ್ತ.
ಇದನ್ನು ಓದಿ : ಗಣೇಶ ಹಬ್ಬಕ್ಕಾಗಿ ಗಲಾಟೆ. ವ್ಯಕ್ತಿ ಕೊಲೆ