ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೆಬಲ್(Head Constable) ಓರ್ವರು  ಅಸ್ವಸ್ಥಗೊಂಡು ಮೃತಪಟ್ಟ  ಘಟನೆ  ಕಾರವಾರದಲ್ಲಿ(Karwar) ನಡೆದಿದೆ.

ಬೆಳಗಾವಿ ಮೂಲದ(Belagavi Native) ಸುನೀಲ ಅಪ್ಪಣ್ಣ ಕೋಳಿ (46) ಮೃತಪಟ್ಟ ದುರ್ದೈವಿ. ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ(Karwar DAR Office) ಕಚೇರಿಯಲ್ಲಿ ಎಂದಿನಂತೆ ತಮ್ಮ ಕರ್ತವ್ಯದಲ್ಲಿದ್ದಾಗ ಸುನೀಲ್  ಹಠಾತ್ತನೆ  ಅಸ್ವಸ್ಥಗೊಂಡು ಕಚೇರಿಯಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ತಕ್ಷಣ ಅಲ್ಲಿದ್ದ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ(Karwar District Hospital) ದಾಖಲಿಸಲು ಮುಂದಾಗಿದ್ದಾರೆ. ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮೊದಲೇ ಸುನೀಲ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ.

ಕರ್ತವ್ಯದಲ್ಲಿದ್ದಾಗ ಸಿಬ್ಬಂದಿ ದಿಢೀರನೆ ಸಾವನ್ನಪ್ಪಿರುವುದು ಪೊಲೀಸ್ ಸಹೋದ್ಯೋಗಿಗಳು  ಮತ್ತು ಸಂಬಂಧಿಕರಲ್ಲಿ  ಶೋಕ ಉಂಟು ಮಾಡಿದೆ.
ಇದನ್ನು ಓದಿ : ಭಟ್ಕಳದಲ್ಲಿ  ಬಲವಂತವಾಗಿ ಯುವತಿಯನ್ನ ಕರೆದೊಯ್ದ ಆರೋಪ: ಅನ್ಯ ಕೋಮಿನ ಯುವಕ ವಶಕ್ಕೆ.