ಮಂಗಳೂರು(MANGLORE) : ಮಾಜಿ ಶಾಸಕ ಮೊಯಿದ್ದೀನ್ ಬಾವ(MOIDDIN BAVA) ಅವರ ಸಹೋದರ ಮುಮ್ತಾಜ್ ಆಲಿ ಕಾಣೆಯಾಗಿದ್ದಾರೆ.

ಮುಂಜಾನೆ ಮೂರು ಗಂಟೆ ಸುಮಾರಿಗೆ  ಕೆಲ ಕಾರಣಗಳಿಂದ ಮನೆಯಿಂದ ಬಿಎಂಡಬ್ಲೂ ಕಾರು (BMW CAR) ಚಲಾಯಿಸಿಕೊಂಡು ಬಂದಿದ್ದರು. ಕುಳೂರು ಸೇತುವೆಯಲ್ಲಿ(KULURU BRIDGE) ಅವರ ಕಾರು ಅಫಘಾತವಾಗಿರುವುದು ಕಂಡು ಬಂದಿದೆ.

ಮುಮ್ತಾಜ್ ಅಲಿ ತಮ್ಮ ಮಗಳಿಗೆ ವಾಟ್ಸಪ್ (WHATSAPP) ಮೂಲಕ ಸಂದೇಶ ರವಾನಿಸಿ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂದಿದ್ದಾರೆ. ಈ ವಿಷಯದಿಂದ ಕುಟುಂಬದವರ ಆತಂಕ ಹೆಚ್ಚಾಗಿದೆ.

ಮುಮ್ತಾಜ್ ಅವರು ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ಆಗಿದ್ದು, ಸ್ಥಳೀಯ ಜಮಾತ್ ನ ಪ್ರಮುಖರಾಗಿದ್ದಾರೆ. ಮಾಜಿ ಶಾಸಕ ಮೊಯಿದೀನ್ ಬಾವಾ ಹಾಗೂ ಕುಟುಂಬಸ್ಥರು ಸ್ಥಳದಲ್ಲಿದ್ದಾರೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್(MANGLORE POLICE COMMISSIONER) ಅನುಪಮ್ ಅಗರ್ವಾಲ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯಿಂದ ಕೆಳಗೆ ಜಿಗಿದಿರುವ ಸಂಶಯ ಇದೆ. ರಕ್ಷಣಾ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಎಫ್ಎಸ್ಎಲ್(FSL) ಅಧಿಕಾರಿಗಳು ಕಾರು ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ಮುರ್ಡೇಶ್ವರದಲ್ಲಿ ಬೆಂಗಳೂರು ವಿದ್ಯಾರ್ಥಿ ನೀರುಪಾಲು

ಲವ್ ಜಿಹಾದ್ ಶಂಕೆ. ಅಧಿಕಾರಿಗಳಿಗೆ ವಿ ಎಚ್ ಪಿ ದೂರು

ಬಿಜೆಪಿಯಲ್ಲಿ ನಿಷ್ಠಾವಂತರ ಕಡೆಗಣನೆ

ಗೋವಾ ಗಡಿಯಲ್ಲಿ ಯಾಂತ್ರಿಕ ಬೋಟುಗಳ ಜಲ ಯುದ್ಧ