ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯೊರ್ವನನ್ನ ಪೊಲೀಸರು ಬಂಧಿಸಿ(Arrest) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಫಾರುಖ್ ಭೋಗಿಬಾಷಾ (28) ಎಂಬಾತಾನೆ ಬಂಧಿತ ಆರೋಪಿತ. ಸದ್ಯ ಈತನಿಗೆ ನ್ಯಾಯಾಂಗ ಬಂಧನ(Judicial Custody) ವಿಧಿಸಲಾಗಿದೆ. ಶಿವಮೊಗ್ಗ(Shivamogga) ಜಿಲ್ಲೆಯ ಶಿರಾಳಕೊಪ್ಪ(Shiralakopp), ಶಿಖಾರಿಪುರ(Shikaripura) ಮೂಲದ ಈತನು ಕಳೆದ ಸುಮಾರು ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಕಾರಣ ಬಂಧನ ವಾರಂಟ ಹೊರಡಿಸಿಲಾಗಿತ್ತು.
ಜನವರಿ 23 ರಂದು ಮುರ್ಡೇಶ್ವರದ ಓಲಗ ಮಂಟಪದ(Murdeshwar Olaga Mantapa) ಹತ್ತಿರ ಸಿಕ್ಕ ಆರೋಪಿತನನ್ನ ವಶಕ್ಕೆ ಪಡೆದು ಭಟ್ಕಳ ಜೇ.ಎಂ.ಎಫ್.ಸಿ ನ್ಯಾಯಾಲಯ (Bhatkal JMFC Court) ಮುಂದೆ ಹಾಜರಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿದಿಸಿದೆ.
ಈತನ ಮೇಲೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ(Bhatkal Rural Station) ಜಾನುವಾರು ಕಳ್ಳತನ(Cattle Theft), ಸಿದ್ದಾಪುರ ಠಾಣೆಯಲ್ಲಿ (Siddapura Station) ಮಂದಿರ(Temple) ಕಳ್ಳತನ, ಶಿವಮೊಗ್ಗ ಜಿಲ್ಲೆಯ ಹೊಸನಗರ(Hosanagara), ದೊಡ್ಡಪೇಟೆ(Doddapete), ಶಿರಾಳಕೊಪ್ಪ(Shiralakopp), ಹಿರೆಕೆರೂರು(Hirekerooru), ಸೊರಬ(Soraba), ಶಿಕಾರಿಪುರ(Shikaripura) ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸದರಿ ಆರೋಪಿತನು ಸುಮಾರು 15 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯವಿದ್ದು ಹೆಚ್ಚಿನ ಪ್ರಕರಣಗಳು ಜಾನುವಾರು ಕಳ್ಳತನದಿರುವ ಬಗ್ಗೆ ತಿಳಿದು ಬಂದಿದೆ. ಅಲ್ಲದೇ ಈತನು ತೀರ್ಥಳ್ಳಿ ಪೊಲೀಸ್ ಠಾಣೆಯಲ್ಲಿ ಧೀರ್ಘಕಾಲದ (LPR NO: 24/24) ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿತನಾಗಿದ್ದಾನೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ.ಎಂ., ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಹೇಶ.ಎಂ.ಕೇ. ರವರ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೇ.ಆರ್, ಪಿ.ಎಸ್.ಐ ನವೀನ್ ಎಸ್ ನಾಯ್ಕ ನೇತೃತ್ವದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ HC ಜೈರಾಮ ಹೊಸ್ಕಟ್ಟಾ, ಉದಯ ನಾಯ್ಕ, ಮುರ್ಡೇಶ್ವರ ಠಾಣೆಯ ಸುರೇಶ ದೇವಾಡಿಗ ಮತ್ತು PC ಕಾಶಿನಾಥ ಕೊಟಗುಣಶಿ ಬಂಧಿಸುವ ಕಾರ್ಯಾಚರಣೆ ನಡೆಸಿದ್ದರು.
ಇದನ್ನು ಓದಿ : 10 ದಿನಗಳಲ್ಲಿ 10 ಕೋಟಿ ರೂ ಆದಾಯ! ಕುಂಭಮೇಳದಿಂದ ಊರಿಗೆ ಹೋದವಳ ಮ್ಯಾಜಿಕ್.
ಹುಲಿ ಮೂತ್ರಕ್ಕೆ ಬೇಡಿಕೆ. ಮೃಗಾಲಯದಲ್ಲಿ ತಯಾರಾಯ್ತು ಔಷಧ.
ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ. ಒಂಬತ್ತು ಭಾರತೀಯರ ದುರ್ಮರಣ.
ಶಿರಸಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ. ಆತಂಕಗೊಂಡು ಓಡಿದ ನಾಗರಿಕರು.