ಹಳಿಯಾಳ(Haliyal) : ಬಲೂನ್(Baloon) ಊದುತ್ತಿದ್ದ ವೇಳೆ ಉಸಿರುಗಟ್ಟಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಹಳಿಯಾಳ‌ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ(Joganakoppa Village) ನಡೆದಿದೆ.

ನವೀನ ನಾರಾಯಣ ಬೆಳಗಾಂವಕರ(13) ಸಾವು ಕಂಡ ಬಾಲಕ.‌ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಭಾನುವಾರ ರಾತ್ರಿ  ಬಾಲಕ ಮನೆಯಲ್ಲಿದ್ದಾಗ ಬಲೂನಿಗೆ ಬಾಯಿಂದ ಗಾಳಿ‌ ತುಂಬುವ ಸಂದರ್ಭದಲ್ಲಿ ಉಲ್ಟಾ ಹೊಡೆದ ಬಲೂನ್ ನೇರವಾಗಿ ಬಾಲಕನ ಗಂಟಲಿನಲ್ಲಿ ಸಿಲುಕಿದೆ. ಇದರಿಂದ ಶ್ವಾಸ ತೆಗೆದುಕೊಳ್ಳಲಾಗದೆ ಬಾಲಕ  ಸ್ಥಳದಲ್ಲಿ ಬಿದ್ದು ಒದ್ದಾಡಿದ್ದಾನೆ.

ತಕ್ಷಣ  ಮನೆಯವರು ಬಲೂನ್ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಆದರೇ ಅದಾಗಲೆ ನೇರವಾಗಿ ಗಂಟಲಲ್ಲಿ (Throat) ಭದ್ರವಾಗಿ ಸಿಕ್ಕಿ ಹಾಕಿಕೊಂಡ ಬಲೂನ್ ಮೂಗು ಹಾಗೂ ಬಾಯಿಂದಲೂ ಶ್ವಾಸ ತೆಗೆದುಕೊಳ್ಳಲಾಗದ ಹಾಗೆ ತಡೆ ಮಾಡಿದೆ.

ಕೂಡಲೇ ಹಳಿಯಾಳ ಸರ್ಕಾರಿ  ಆಸ್ಪತ್ರೆಗೆ (Haliyal Government Hospital) ಬಾಲಕನನ್ನು ದಾಖಲಿಸಿದಾಗ ವೈದ್ಯರು ತಪಾಸಣೆ ನಡೆಸಿ ಬಾಲಕ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಬಾಲಕನ ಹಠಾತ್ ಸಾವಿನಿಂದ ಜೋಗನಕೊಪ್ಪ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.  ಕುಟುಂಬಸ್ಥರು ಹಾಗೂ ಸಂಬಂಧಿಗಳ ರೋಧನ ಮುಗಿಲು ಮುಟ್ಟಿದೆ.   ಹಳಿಯಾಳ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ರಸ್ತೆ ಅಪಘಾತದಲ್ಲಿ ಯುವ ಪೊಲೀಸ್ ಅಧಿಕಾರಿ ದುರ್ಮರಣ

ಈಜಲು ತೆರಳಿದ ಸ್ನೇಹಿತರಿಬ್ಬರ ಸಾವು

ಹಸು ಹುಡುಕಲು ಹೋದ ಮೂವರು ಮಹಿಳೆಯರು ನಾಪತ್ತೆ