ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೊಯಿಡಾ(Joida): ಜಮೀನಿನ ಪಕ್ಕ ಬೇಲಿ ನಿರ್ಮಿಸುತ್ತಿರುವಾಗ ಕರಡಿ ದಾಳಿ(Bear Attack) ಮಾಡಿ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಜೋಯಿಡಾ ತಾಲೂಕಿನ ಹುಡಸಾ ಗ್ರಾಮದಲ್ಲಿ ನಡೆದಿದೆ.
ತುಕಾರಾಮ ದೇಸಾಯಿ (45) ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಇಡೆಗಾಳಿಯ ತಮ್ಮ ಜಮೀನಿನ ಪಕ್ಕ ಬೇಲಿ ಕಟ್ಟುತ್ತಿದ್ದಾಗ ಎರಡು ಕರಡಿಗಳು ದಾಳಿ ಮಾಡಿ ಈತನ ಮುಖ, ತಲೆ, ಕೈ ಕಾಲು, ಎದೆ ಭಾಗದಲ್ಲಿ ಗಂಭೀರವಾಗಿ ಗಾಯಗೊಳಿಸಿದೆ.
ಗಾಯಗೊಂಡ ತುಕರಾಮನನ್ನು ಜೊಯಿಡಾ ತಾಲೂಕಾ ಆಸ್ಪತ್ರೆಯಲ್ಲಿ(Joida Taluka Hospital) ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನು ಓದಿ : ಅಪಘಾತಕ್ಕೆ ಕಾರಣವಾದ ಚಾಲಕನ ಬಂಧಿಸಿದ ಪೊಲೀಸರು. ಸುಳಿವು ನೀಡಿದ ಪೇಂಟ್ ಚೂರು.
ಭಟ್ಕಳ ಕಲ್ಬಂಡಿ ಇಸ್ಪೀಟ್ ಕ್ಲಬ್ ಮೇಲೆ ಪೊಲೀಸರ ದಾಳಿ. ಹಲವರ ಮೇಲೆ ಪ್ರಕರಣ.