ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಯುವಕನೋರ್ವನ ಮೇಲೆ ಮೂವರು ಚಾಕುವಿನಿಂದ ಹಲ್ಲೈಗೈದ ಘಟನೆ ತಾಲೂಕಿನ ಪುರವರ್ಗ ರೈಲ್ವೆ ಹಳಿ(Purawarga Railway Track) ಸಮೀಪ ನಡೆದಿದೆ.

ನಾಗರಾಜ ಲಕ್ಷ್ಮಣ ನಾಯ್ಕ (24) ಚಾಕು ಇರಿತಕ್ಕೊಳಗಾದ ಯುವಕ. ಈತ ಭಟ್ಕಳ ತಾಲೂಕಿನ ಯಲ್ವಡಿಕವೂರು(Yalwadikavuru) ಗ್ರಾಮದ ಭಗತ ನಗರ ನಿವಾಸಿಯಾಗಿದ್ದಾನೆ. ಪುರವರ್ಗದ ಮಂಜುನಾಥ ಮಾಸ್ತಪ್ಪ ನಾಯ್ಕ, ಹಡೀನದ ದಯಾನಂದ ವೈಕುಂಠ ನಾಯ್ಕ  ಹಾಗೂ ಭಟ್ಕಳದ ಶಿವ ರಾಜು ನಾಯ್ಕ ಹಲ್ಲೆ ಮಾಡಿದವರೆಂದು ಹೇಳಲಾಗಿದೆ.

ಕಳೆದ ಜನವರಿಯಲ್ಲಿ ಭಟ್ಕಳದ  ಸೋಡಿಗದ್ದೆ ಜಾತ್ರೆ(Sodigadde Jatre) ಸಂದರ್ಭದಲ್ಲಿ ಮಂಜುನಾಥ ನಾಯ್ಕ ಮತ್ತು ದಯಾನಂದ ನಾಯ್ಕ ಸೇರಿಕೊಂಡು ವೆಂಕಟೇಶ ಮಂಜುನಾಥ ನಾಯ್ಕ ಮೇಲೆ ಹಲ್ಲೆ ಮಾಡಿದ ಆರೋಪವಿದೆ. ಈ ಸಂಬಂಧ ಆರೋಪಿತರ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ(Bhatkal Rural Station)  ಪ್ರಕರಣ ದಾಖಲಾಗಿತ್ತು. ಇದೇ ವಿಚಾರವಾಗಿ ಆರೋಪಿತರು ಸೋಡಿಗದ್ದೆ ಜಾತ್ರೆ ಸಮಯದಲ್ಲಿ ಹಲ್ಲೆ ನಡೆದ ಸಮಯದಲ್ಲಿ ಹಲ್ಲೆಗೊಳಗಾದ ಯುವಕ ತಮ್ಮ ಸಂಗಡ ಬರಲಿಲ್ಲ ಎಂಬ ಕಾರಣಕ್ಕೆ ನಾಗರಾಜ ಮೇಲೆ ಸಿಟ್ಟಿನಿಂದ ಇದ್ದರೆನ್ನಲಾಗಿದೆ.

ಮಂಗಳವಾರ ರಾತ್ರಿ ಸುಮಾರಿಗೆ ನಾಗರಾಜ ಮತ್ತು ಆತನ ಗೆಳೆಯನಾದ ಲೊಕೇಶ ಗಣಪತಿ ನಾಯ್ಕ ಮೋಟಾರ ಸೈಕಲಿನಲ್ಲಿ ಬರುತ್ತಿರುವಾಗ ಹಲ್ಲೆ ನಡೆಸಿದ್ದಾರೆ. ಪುರವರ್ಗದ ರೈಲ್ವೆ ಟ್ರ್ಯಾಕ್ ಹತ್ತಿರ ಮೂವರೂ ಆರೋಪಿತರು ಒಂದೇ ಮೋಟಾರ ಸೈಕಲಿನಲ್ಲಿ ಬಂದವರು ನಾಗರಾಜನ ಮೋಟಾರ್ ಸೈಕಲನ್ನು ಅಡ್ಡಗಟ್ಟಿ ತಡೆದು ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಮಂಜುನಾಥ ನಾಯ್ಕ ತನ್ನ ಬಳಿ ಇದ್ದ ಚಾಕುವಿನಿಂದ ನಾಗರಾಜನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ (Bhatkal Rural Station)  ದೂರು ದಾಖಲಾಗಿದೆ.

ಇದನ್ನು ಓದಿ :   ಶಿಫಾನಾ ಬೇಗಂ ಕಲ್ಲೂರ್‌ಗೆ ಡಾಕ್ಟರೇಟ್‌ ಪದವಿ ಪ್ರದಾನ

ಫೆಬ್ರವರಿ 28ರಂದು ಉದಯೊನ್ಮುಖ ಪ್ರತಿಭೆಯ ಪ್ರತ್ಯರ್ಥ ಸಿನೆಮಾ ಬಿಡುಗಡೆ.

ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕ ಎದುರೇ ಡಿಶುಮ್ ಡಿಶುಮ್.

ಕಾರವಾರ ಅಂಕೋಲಾದಲ್ಲಿ ಎನ್ ಎ ಐ ಬೇಟೆ. ಇಬ್ಬರು ಲಾಕ್