ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಹಮದಾಬಾದ್‌(Ahamadabad): ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾದ ಏಐ 171 ವಿಮಾನ ಪತನದ ಘೋರ ದುರಂತ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ದುರಂತದಲ್ಲಿ ವಿಮಾನದಲ್ಲಿದ್ದ 241 ಮತ್ತು ದುರಂತ ಸಂಭವಿಸಿದ  ಮೆಡಿಕಲ್‌ ಹಾಸ್ಟೆಲ್‌ನಲ್ಲಿದ್ದ 24 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಓರ್ವ ಅದೃಷ್ಟವಶಾತ್ ಜಿಗಿದು ಬಚಾವ್ ಆಗಿದ್ದ.

ಘಟನೆಯಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಅಹಮದಾಬಾದ್ ನ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನ ವಿಚಾರಿಸಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದರು.

ಜೂನ್ 12 ರಂದು ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿತ್ತು. ದುರಂತ ನಡೆದಿದ್ದೇಗೆ ಎಂಬುದರ  ಮಾಹಿತಿ ನೀಡುವ ಬ್ಲ್ಯಾಕ್‌ಬಾಕ್ಸ್‌ ಘಟನೆ ನಡೆದ ಸ್ಥಳದಿಂದ ನಾಪತ್ತೆಯಾಗಿತ್ತು. ಇಂದು  ಮಾಹಿತಿ ಹೊಂದಿರುವ ಬ್ಲ್ಯಾಕ್‌ಬಾಕ್ಸ್‌ ಪತ್ತೆಯಾಗಿದೆ.

ವಿಮಾನ ಪತನಕ್ಕೆ ತಾಂತ್ರಿಕ ದೋಷವೋ?  ಪೈಲಟ್‌ ನ ತಪ್ಪೋ ? ಇಂಜಿನ್‌ ವೈಫಲ್ಯವೇ? ಅಥವಾ ಬಾಹ್ಯ ಕಾರಣಗಳಿಂದ ವಿಮಾನ ಪತನ ಆಗಿದೆಯಾ? ಎಂಬ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿದ್ದವು. ಇದಕ್ಕೆ  ವಿಮಾನದಲ್ಲಿರುವ ಬ್ಲಾಕ್‌ ಬಾಕ್ಸ್‌  ನಿಂದ ಉತ್ತರ ಸಿಗುವ ನಿರೀಕ್ಷೆ ಇದೆ.  ವಿಮಾನ ಪತನದ ದುರಂತಕ್ಕೆ ಸಂಬಂಧಿಸಿ  ತನಿಖೆ ನಡೆಯುತ್ತಿದೆ, ಪತ್ತೆಯಾಗಿರುವ  ಬ್ಲ್ಯಾಕ್‌ ಬಾಕ್ಸ್‌ ಅನ್ನು ವಿಶ್ಲೇಷಣೆಗೆ ತಜ್ಞರಿಗೆ ನೀಡಲಾಗಿದೆ.

ಹಾಗಾದ್ರೆ ಬ್ಲ್ಯಾಕ್‌ ಬಾಕ್ಸ್‌ ಏನು?: ವಿಮಾನ ಅಪಘಾತದ ಸಂದರ್ಭದಲ್ಲಿ ಬ್ಲ್ಯಾಕ್ ಬಾಕ್ಸ್ ಪ್ರಮುಖ ಪಾತ್ರ ವಹಿಸುತ್ತವೆ. ದುರಂತ ನಡೆದಾಗ ತನಿಖೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಈ ‘ಬ್ಲ್ಯಾಕ್ ಬಾಕ್ಸ್’ ಆಗಿರುತ್ತೆ. ಇದನ್ನು ಅತ್ಯಂತ ಸುರಕ್ಷಿತವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಎಂಥ , ಭೀಕರ ಅಪಘಾತವಾದಾಗಲೂ  ಅದಕ್ಕೆ ಏನು ಹಾನಿಯಾಗಲ್ಲ. ಬ್ಲ್ಯಾಕ್ ಬಾಕ್ಸ್ ಇಲ್ಲದಿದ್ದರೆ, ಅಪಘಾತಕ್ಕೆ ಕಾರಣವನ್ನು ಹುಡುಕಲು ಕೂಡ ಕಷ್ಟವಾಗುತ್ತೆ.  ಪೈಲಟ್ ನ ತಪ್ಪು, ತಾಂತ್ರಿಕ ದೋಷಗಳು, ಹವಾಮಾನ ಅಥವಾ ಬಾಹ್ಯ ದಾಳಿಯಿಂದ ಏನಾದರೂ ವಿಮಾನ ಪತನವಾಯ್ತಾ ಎಂಬುದನ್ನು ಗುರುತಿಸಲು ಬ್ಲ್ಯಾಕ್ ಬಾಕ್ಸ್ ಸಹಾಯ ಮಾಡುತ್ತದೆ.

ಜೂನ್ 12 ಗುರುವಾರ ಮಧ್ಯಾಹ್ನ 1:38 ಕ್ಕೆ ಟೇಕ್-ಆಫ್ ಆದ ಕ್ಷಣಾರ್ಧದಲ್ಲಿಯೇ ವಿಮಾನ  ಪತನ ಆಗಿದ್ದು ಹೇಗೆ? ಯಾವಾಗ ಪೈಲಟ್‌ ಮೇ ಡೇ ಎಂದು ಎಟಿಸಿಗೆ ತಿಳಿಸಿದರು. ಆ ಒಂದು ನಿಮಿಷದಲ್ಲಿ ವಿಮಾನದೊಳಗಡೆ ಏನೆಲ್ಲಾ ಆಯ್ತು ಎಂಬುದನ್ನು ಬ್ಲ್ಯಾಕ್‌ ಬಾಕ್ಸ್‌ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ.

ಇದನ್ನು ಓದಿ : ಮುಂಡಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ದಾಖಲು. ನಿರಂತರ ವರ್ಷಧಾರೆಯಿಂದ ಜನಜೀವನ ಅಸ್ತವ್ಯಸ್ತ.

ಭಟ್ಕಳದ ಈ ಮಾರ್ಗದಲ್ಲಿ ಸಂಚಾರ ನಿಷೇಧ – ಪರ್ಯಾಯ ಮಾರ್ಗ ಅನುಸರಿಸಿ : ಜಿಲ್ಲಾಧಿಕಾರಿ

ಸಿದ್ದಾಪುರ, ಶಿವಮೊಗ್ಗ ಗಡಿಯಲ್ಲಿ ಲವ್ ದೋಖಾ ಜಾಲ. ಬಯಲಿಗೆಳೆದ ಯುವಕ ಆತ್ಮತ್ಯೆ. ಹಲವರ ಬಂಧನ.*