ಮುರ್ಡೇಶ್ವರ(Murdeshwar) : ಇಲ್ಲಿನ ಕಡಲ ತೀರದಲ್ಲಿ ಪ್ರವಾಸಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ ಅವರು ಮುರ್ಡೇಶ್ವರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡು ದಾಖಲಾದ ಆರ್.ಎನ್.ಎಸ್. ಆಸ್ಪತ್ರೆಗೆ (RNS Hospital) ಭೇಟಿ ನೀಡಿದ ಡಿಸಿ ಎಸ್ಪಿ ಬಾಲಕಿಯರ ಆರೋಗ್ಯ ವಿಚಾರಿಸಿದರು. ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಅವರು ಕೂಡ ಆರ್.ಎನ್.ಎಸ್. ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದಾರೆ. ಮುರ್ಡೇಶ್ವರ ಠಾಣೆಗೆ ಭೇಟಿ ನೀಡಿದ ಎಸ್ಪಿ ನಾರಾಯಣ ವಿದ್ಯಾರ್ಥಿನಿಯರನ್ನು ರಕ್ಷಿಸಿದ ಲೈಫ್ ಗಾರ್ಡ್ ಮತ್ತು ಕೆಎನ್‌ಡಿ ಸಿಬ್ಬಂದಿ ಯೋಗೇಶ, ಶೇಖರ ಮತ್ತು ಗಿರೀಶ ಅವರನ್ನು ಅಭಿನಂದಿಸಿದರು.
ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ವಿದ್ಯಾರ್ಥಿಗಳು ಮುರ್ಡೇಶ್ವರಕ್ಕೆ (Murudeshwar) ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ಒಟ್ಟು 27 ಗಂಡುಮಕ್ಕಳು ಹಾಗೂ 19 ಹೆಣ್ಣು ಮಕ್ಕಳು, ಇಬ್ಬರು ಮಹಿಳಾ ಶಿಕ್ಷಕಿಯರು ಮತ್ತು ನಾಲ್ವರು ಪುರುಷ ಶಿಕ್ಷಕರು, ಪ್ರಾಂಶುಪಾಲೆ ಶಶಿಕಲಾ ನೇತೃತ್ವದಲ್ಲಿ ಖಾಸಗಿ ಬಸ್ಸಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಕಡಲ ತೀರದಲ್ಲಿ ಆಟವಾಡುತ್ತಿರುವಾಗ ನೀರಿನ ಸುಳಿಗೆ ಸಿಲುಕಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರೂ ವಿದ್ಯಾರ್ಥಿನಿಯರ ಆರೋಗ್ಯ ಸುಧಾರಿಸಿದೆ. ಕಾಣೆಯಾಗಿರುವ ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬೆಳಿಗ್ಗೆಯಿಂದ ಸ್ಥಳೀಯ ಮೀನುಗಾರರ ಸಹಾಯದಿಂದ ಲೈಫ್ ಗಾರ್ಡ್(Life Guard) ಹಾಗೂ ಕರಾವಳಿ ಕಾವಲು ಪಡೆ (CSP) ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸದ್ಯ ಕಡಲತೀರಕ್ಕೆ ಪ್ರವೇಶ ನಿಷೇಧಿಸಲಾಗಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನು ಓದಿ : ಮುರ್ಡೇಶ್ವರ ಕಡಲತೀರದಲ್ಲಿ ದುರಂತ. ಪ್ರವಾಸಕ್ಕೆ ಬಂದ ಶಾಲಾ ವಿದ್ಯಾರ್ಥಿನಿ ಸಾವು. ಮೂವರು ನಾಪತ್ತೆ.
ಡಿಸೆಂಬರ್ 13 ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಸಭೆ.
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟಕ್ಕೆ ಬೇಡಿಕೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ.