ಉಡುಪಿ (Udupi): ಖಜಾನೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ(Lokayukta Raid) ನಡೆಸಿದ್ದಾರೆ. ಪೆನ್ಶನ್ ಹಣ(Pention Money) ನೀಡಲು ಲಂಚ ಪಡೆಯುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ.
ನಿವೃತ್ತ ಶಿಕ್ಷಕಗೆ ಪೆನ್ಶನ್(Pention) ಹಣ ಬಿಡುಗಡೆಗೊಳಿಸಲು ಅಧಿಕಾರಿಗಳು ಲಂಚ ಕೇಳಿದ ಆರೋಪವಿತ್ತು. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು(Lokayukta Officers) ದಾಳಿ ನಡೆಸಿದ್ದಾರೆ.
ಉಡುಪಿ(Udupi) ಖಜಾನೆಯ ಉಪನಿರ್ದೇಶಕ ರವಿಕುಮಾರ್ ಹಾಗೂ ಸಹಾಯಕ ರಾಘವೇಂದ್ರ ಲೋಕಾಯುಕ್ತರು ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕ(Retired Teacher) ಹಿತೇಂದ್ರ ಭಂಡಾರಿ ಅವರ ಪೆನ್ಶನ್ ಹಣ ನೀಡಲು ಕಳೆದ 5 ತಿಂಗಳಿನಿಂದ ಐದು ಸಾವಿರ ರೂ. ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು.
ಈ ಬಗ್ಗೆ ಲೋಕಾಯುಕ್ತಗೆ ಹಿತೇಂದ್ರ ಅವರು ದೂರು ನೀಡಿದ್ದರು. ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ(Lokayukta DYSP) ಮಂಜುನಾಥ್ ಅವರ ತಂಡ ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ.
ಇದನ್ನು ಓದಿ : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ