ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) : ಪೊಲೀಸ್ ಇಲಾಖೆಯಲ್ಲಿನ(Police Department) ಪೋಸ್ಟಿಂಗ್ ಹಾಗೂ ಹಣದ ವ್ಯವಹಾರದ ಕುರಿತು ಮಾತನಾಡಿಕೊಂಡಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Soicial Media) ವೈರಲ್ ಆದ ಬೆನ್ನಲ್ಲೇ, ಕಾರ್ಯಾಚರಣೆಗೆ ಇಳಿದಿರುವ ಉತ್ತರ ಕನ್ನಡ(Uttarkannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್ ಅವರು ಮೂವರು ಪೊಲೀಸ್ ಅಧಿಕಾರಿಗಳನ್ನ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ(Suspend Order) ಹೊರಡಿಸಿದ್ದಾರೆ.
ಹಳಿಯಾಳ ಕಾನೂನು ಮತ್ತು ಸುವ್ಯವಸ್ಥೆ (L&O) ಪಿಎಸ್ಐ ಕಿರಣ್ ಪಾಟೀಲ್, ಹಳಿಯಾಳ ಅಪರಾಧ ವಿಭಾಗದ (Crime) ಪಿಎಸ್ಐ ಕೃಷ್ಣ ಅರಕೆರೆ ಹಾಗೂ ಹಳಿಯಾಳದ ಮಾಜಿ ಪಿಎಸ್ಐ ವಿನೋದ್ ರೆಡ್ಡಿ ಅಮಾನತ್ತಾದ ಅಧಿಕಾರಿಗಳು.
ಪ್ರಕರಣದ ಹಿನ್ನೆಲೆ ಏನು? : ಹಳಿಯಾಳ ಪೊಲೀಸ್ ಠಾಣೆಯ(Haliyal Police Station) ಕಾನೂನು ಮತ್ತು ಸುವ್ಯವಸ್ಥೆ (L&O) ಪಿಎಸ್ಐ ಹುದ್ದೆಯ ಪೋಸ್ಟಿಂಗ್ಗಾಗಿ ನಡೆದಿದೆ ಎನ್ನಲಾದ ಭಾರಿ ಹಣದ ವ್ಯವಹಾರ ಹಾಗೂ ಮೇಲಾಧಿಕಾರಿಗಳಿಗೆ ಮಾಸಿಕ ಲಂಚ (ಮಂತ್ಲಿ ಕಲೆಕ್ಷನ್) ನೀಡುವ ವಿಷಯದ ಕುರಿತು ಈ ಮೂವರು ಅಧಿಕಾರಿಗಳು ಪರಸ್ಪರ ಮಾತನಾಡಿಕೊಂಡಿದ್ದರು. ಈ ಆಡಿಯೋ ಸಂಭಾಷಣೆಯು ಜನತಾದಳ ಯುನೈಟೆಡ್ (JDS) ಪಕ್ಷದ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಆದ ನಂತರ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಮೂವರು ಮಾತನಾಡಿರೋ ಆಡಿಯೋ ವೈರಲ್ ಆಗಿ ಪೊಲೀಸ್ ಇಲಾಖೆಗೆ ಮುಜುಗರ ಉಂಟಾಗುತ್ತಿದ್ದಂತೆ ಎಚ್ಚೆತ್ತ ಎಸ್ಪಿ ದೀಪನ್ ಎಂ.ಎನ್ ಅವರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತಕ್ಷಣದ ತನಿಖೆಗೆ ಆದೇಶಿಸಿದ್ದರು.
ಪ್ರಕರಣದ ಕುರಿತು ಎಎಸ್ಪಿ ಅವರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಮೂವರನ್ನೂ ಅಮಾನತುಗೊಳಿಸಲಾಗಿದೆ. ಈ ಕಟ್ಟುನಿಟ್ಟಿನ ಕ್ರಮವು ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಕೆಲ ತಿಂಗಳ ಹಿಂದೆ ಹಳಿಯಾಳದಲ್ಲಿ ರಂಪಾಟ ನಡೆಸಿದ್ದ ಮಚ್ ಮಂಜಾ ಎಂಬಾತನ ಪ್ರಕರಣದಿಂದಲೇ ಈ ರೀತಿಯಾಗಿ ಪೋಸ್ಟಿಂಗ್, ಮಂತ್ಲಿ ವಿಚಾರ, ಬಳಿಕ ಇನ್ನೋರ್ವ ಪಿಎಸ್ಐ ಮೇಲೆ ತೆಗೆದುಕೊಂಡ ಕ್ರಮಗಳು. ಇವೆಲ್ಲವನ್ನ ಹಳಿಯಾಳದ ಜನತೆ ಮತ್ತು ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಈಗ ಮೆಲುಕು ಹಾಕುತ್ತಿದ್ದಾರೆ. ಏನೇ ಇರಲಿ ಮೇಲಾಧಿಕಾರಿಗಳ ಹೆಸರನ್ನ ಎಳೆದು ತಂದು ಈಗ ಮೂವರು ಪಿಎಸೈಗಳು ತಲೆದಂಡ ತೆರುವಂತಾಗಿದೆ.
