ಬೈಂದೂರು : ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಕೊಂಚ ಕಡಿಮೆಯಾಗಿದೆ. ವೀಕೆಂಡ್ ರಜೆ ಹಾಗೂ ಬಕ್ರೀದ್ ರಜೆ ಇರುವುದರಿಂದ ತ್ರಾಸಿ ಮರವಂತೆ ಬೀಚಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಮಳೆಗಾಲದಲ್ಲಿ ಕಡಲ ತೀರದ ಸೊಬಗು ಹೆಚ್ಚಾಗಿದ್ದು. ಕಡಲ ಅಲೆಯನ್ನ ಕಂಡ ಪ್ರವಾಸಿಗರ ಮೋಜು – ಮಸ್ತಿ ಜಾಸ್ತಿಯಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ತ್ರಾಸಿಯ ಮರವಂತೆ ಬೀಚ್ನಲ್ಲಿ ಬೆಳಗಿನಿಂದ ಸಂಜೆಯ ತನಕ ಪ್ರವಾಸಿಗರ ದಟ್ಟನೆ ಹೆಚ್ಚಾಗಿದೆ. ಮಳೆಗಾಲದ ಸಮಯವಾಗಿದ್ದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮುಂಜಾಗ್ರತ ಕ್ರಮ ಕೈಗೊಂಡಿದೆ
ಪ್ರವಾಸಿಗರನ್ನು ನಿಯಂತ್ರಿಸಲು ತ್ರಾಸಿ ಮರವಂತೆ ಬೀಚ್ನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಸ್ಥಳದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು, ಕರಾವಳಿ ನಿಯಂತ್ರಣ ದಳ, ಲೈಫ್ ಗಾರ್ಡ್, ಹೋಂ ಗಾರ್ಡ್, ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.