ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉತ್ತರಪ್ರದೇಶ (Uttarapradesh) : ಪತಿ  ಹೈ ಹೀಲ್ಸ್(High Heels) ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ಆತನ  ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

ಇದೇ ಹೈ ಹೀಲ್ಸ್ ಚಪ್ಪಲಿಯ(High Heels Footwear)  ಜಗಳ ವಿಚ್ಛೇದನ(Divorce) ಹಂತಕ್ಕೆ ತಲುಪಿ, ಬಳಿಕ  ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಪತಿ ಪತ್ನಿಯರ ನಡುವೆ ಸಂಧಾನ ನಡೆಸಲಾಗಿದೆ.  ಉತ್ತರ ಪ್ರದೇಶದ ಆಗ್ರಾದಲ್ಲಿ(Uttarapradesh Agra) ಈ ಸಂಗತಿ ಬೆಳಕಿಗೆ ಬಂದಿದ್ದು  ತನ್ನ ಪತಿ ತನಗೆ ಹೈ ಹೀಲ್ಸ್ ಚಪ್ಪಲಿ ತೆಗೆಸಿ ಕೊಟ್ಟಿಲ್ಲ ಎಂದು ಪತ್ನಿ ಪೊಲೀಸ್‌ ಠಾಣೆಯ(Police Station) ಮೆಟ್ಟಿಲೇರಿದ್ದಾಳೆ. ವರ್ಷದ  ಹಿಂದೆ ಮದುವೆಯಾಗಿದ್ದ ಈ ದಂಪತಿಯ ಜಗಳ ಚಪ್ಪಲಿ ವಿಚಾರದಲ್ಲಿ ಬಹಿರಂಗವಾಗಿದೆ.

ಹೈ ಹೀಲ್ಸ್ ಚಪ್ಪಲಿ ಧರಿಸುವುದೆಂದರೆ ಆಕೆಗೆ ಬಹಳ ಖುಷಿಯಂತೆ. ಹೀಗಾಗಿ ಆಕೆ ಪತಿಯ ಬಳಿ ಹೈ ಹೀಲ್ಸ್ ಕೊಡಿಸುವಂತೆ ಕೇಳಿದ್ದಾಳೆ. ಆಕೆಯ ಬೇಡಿಕೆಗೆ ಪತಿ ಒಪ್ಪದಿದ್ದಾಗ, ಇಬ್ಬರ ನಡುವೆ ಕದನ ಶುರುವಾಗಿದೆ. ಸಿಟ್ಟಿನಿಂದ ಆಕೆ ತವರು ಮನೆಗೆ ಸೇರಿಕೊಂಡಿದ್ದಲ್ಲದೆ  ಪೊಲೀಸ್ ದೂರು ದಾಖಲಿಸಿದ್ದಾಳೆ. ಹೈ ಹಿಲ್ಸ್ ಚಪ್ಪಲಿ ಕೊಡಿಸದ ಗಂಡ ನನಗೆ ಬೇಡ. ನನಗೆ ಡಿವೋರ್ಸ್ ಬೇಕೆಂದು ಕೇಳಿದ್ದಾಳೆ.

ಆಶ್ಚರ್ಯ ಅಂದ್ರೆ ಆಕೆ ಒಮ್ಮೆ ಹೈ ಹೀಲ್ಸ್ ಧರಿಸಿ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಳು. ಅದೇ ಕಾರಣಕ್ಕೆ ಪತಿ ಹೈ ಹೀಲ್ಸ್ ಚಪ್ಪಲಿ ಕೊಡಿಸಲು ನಿರಾಕರಿಸಿದ್ದ ಎನ್ನಲಾಗಿದೆ. ಇವರ ಜಗಳ ಕ್ಷುಲ್ಲಕ ಕಾರಣಕ್ಕಾಗಿ ಎಂದು ತಿಳಿದ ಪೊಲೀಸರು ಇಬ್ಬರನ್ನೂ ಮನವೊಲಿಸಲು ಪ್ರಯತ್ನಿಸಿದ್ದಾರೆ. ಒಪ್ಪದಿದ್ದಾಗ  ಕುಟುಂಬ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಯು ಕೌನ್ಸೆಲಿಂಗ್‌ ನಡೆಸಿ ಇಬ್ಬರ ನಡುವಿನ ಜಗಳವನ್ನು ಶಮನಗೊಳಿಸಿ ಇಬ್ಬರನ್ನ ಒಂದುಗೂಡಿಸಿ ಮನೆಗೆ ಕಳಿಸಿದ್ದಾರೆ.

ಇದನ್ನು ಓದಿ : ಫೆ.13ಕ್ಕೆ ಉಳವಿ ಮಹಾರಥೋತ್ಸವ. ಭಕ್ತರ ಗಮನಕ್ಕೆ.

ಭಟ್ಕಳದಲ್ಲಿ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ. ಏಳು ಜನರ ಬಂಧನ.

ಬಡ್ಡಿ Expenses ಮೀಟರ್ ಇಳಿಸಿದ ಪೊಲೀಸರು. ಇಬ್ಬರ ಬಂಧನ

ಅದ್ದೂರಿಯಿಂದ ಜರುಗಿದ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವರ ಪಾಲಕಿ ಉತ್ಸವ.

ಕುಂಭಮೇಳದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ