ಕಾರವಾರ : ಕರಾವಳಿಯ ಪ್ರಭಾವಿ ಮುಖಂಡ ರಾಜು ತಾಂಡೇಲ ನಿಧನಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಸಂತಾಪ ಸೂಚಿಸಿದ್ದಾರೆ.

ಮಂಗಳವಾರ ರಾಜು ತಾಂಡೇಲ್ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆದ ಸಚಿವರು, ಭಗವಂತ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸಿದರು.

ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್, ಎಂಎಲ್ಸಿ ಗಣಪತಿ ಉಳ್ವೆಕರ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಸೇರಿದಂತೆ ಹಲವು ಮುಖಂಡರು ಇದ್ದರು.

ಕಾರವಾರದ ಜಿಲ್ಲಾಸ್ಪತ್ರೆಯಿಂದ ಜನಸಾಗರದ ನಡುವೆ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಮೀನುಗಾರ ಸಮಾಜದ ಮುಖಂಡರು, ನಾಗರಿಕರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಜು ತಾಂಡೇಲ್ ನಿಧನಕ್ಕೆ ಮೀನು ಮಾರುಕಟ್ಟೆ ಬಂದ್ ಮಾಡಿ ಮಹಿಳೆಯರು ಸಂತಾಪ ಸೂಚಿಸಿದ್ದಾರೆ. ಕಾರವಾರದ ಮೀನುಗಾರಿಕೆ ಬಂದರಿನಲ್ಲಿ ಯಾಂತ್ರಿಕ ದೋಣಿಗಳು ಬಂದ್ ಮಾಡಲಾಗಿತ್ತು.