ಅಂಕೋಲಾ (Ankola): ತಾಲೂಕಿನ ಬೊಬ್ರುವಾಡ (Bobruwada) ಗ್ರಾಪಂ ವ್ಯಾಪ್ತಿಯ ಕನಸಿಗದ್ದೆಯಲ್ಲಿ(Kanasigadde) ಮನೆಯ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನ ತಲೆಯ ಮೇಲೆ ಸ್ಲೈಡಿಂಗ್ ಗೇಟ್ (Slaiding gate) ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಆಜಮ್ ಜಾವೇದ್ ಶೇಕ್ (5) ನಿಧನ ಹೊಂದಿದ ಬಾಲಕನಾಗಿದ್ದಾನೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಮನೆಯ ಮುಂದಿನ ಗೇಟ್ ಮುರಿದು ತಲೆಯ ಮೇಲೆ ಬಿದ್ದ ಪರಿಣಾಮ ಬಾಲಕನನ್ನು ತಕ್ಷಣ ತಾಲೂಕಿನ ಖಾಸಗಿ ಆಸ್ಪತ್ರೆಗೆ(Private Hospital) ದಾಖಲಿಸಲಾಗಿತ್ತು. ತಲೆಗೆ ತೀವ್ರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸಾಗಿಸಬೇಕೆಂದು ತಿಳಿಸಿದಾಗ ಮಣಿಪಾಲದ ಆಸ್ಪತ್ರೆಗೆ(Manipal Hospital) ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹೊನ್ನಾವರದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

ಮೃತ ಬಾಲಕನಿಗೆ ಇಬ್ಬರು ಹಿರಿಯ ಸಹೋದರಿಯರಿದ್ದಾರೆ. ಚಾಲಕ ವೃತ್ತಿ ಮಾಡುತ್ತಿದ್ದ ತಂದೆಗೆ ಮಗನ ಸಾವು ಬರಸಿಡಿಲಿನಂತೆ ಬಡಿದಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ (Ankola Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಕಾಡು ಹಂದಿ ಬೇಟೆ ಮಾಡಿದ ಮೂವರ ಬಂಧನ

ಅಣ್ಣನ ಕಾಲು ಮುರಿದ ತಮ್ಮನ ಕೊಲೆಗೈದ ಅಣ್ಣ

ಕುಕ್ಕೆಗೆ ಬರುವ ಭಕ್ತರಿಗೆ ಸೂಚನೆ