ಕಾರವಾರ(Karwar) : ನಗರ ಪ್ರದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ನ್ನ ನಿಯಂತ್ರಿಸಲು(Plastics Control) ನಗರಸಭೆ (CMC) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ಮುಂದಾಗಿದೆ.

ಕಳೆದ ಒಂದು ವಾರಗಳಿಂದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರವಾರದ ಅಂಗಡಿಗಳಲ್ಲಿ, ಮಾರುಕಟ್ಟೆಯಲ್ಲಿ ದಾಳಿ (Market Raid) ಮಾಡುತ್ತಿದ್ದಾರೆ. ಈಗಾಗಲೇ ಜನ ಜಾನುವಾರುಗಳಿಗೆ ಮಾರಕವಾಗಿರುವ ಏಕ ಬಳಕೆ ಪ್ಲಾಸ್ಟಿಕ್ ಗಳನ್ನ ನಿಷೇಧಿಸಲಾಗಿದ್ದು(Plastic Ban), ಈ ಕಾರಣಕ್ಕೆ  ಪ್ಲಾಸ್ಟಿಕ್ ಮಾರಾಟವಾಗದಂತೆ ಲಕ್ಷ್ಯ ವಹಿಸುತ್ತಿದ್ದಾರೆ.

ಭಾನುವಾರದ ಸಂತೆ(Sunday Market) ಮಾರುಕಟ್ಟೆಯಲ್ಲೂ ಕೂಡ ವ್ಯಾಪಾರಿಗಳು ವ್ಯಾಪಕ ಪ್ರಮಾಣದ ಪ್ಲಾಸ್ಟಿಕ್ ನ ಬಳಸುತ್ತಿರುವ ಕಾರಣಕ್ಕೆ ಎರಡು ವಾರಗಳಿಂದ ದಾಳಿ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮಾರುವವರಿಗೆ ಐನೂರು, ಸಾವಿರ ರೂ ದಂಡ ವಿಧಿಸುತ್ತಿದ್ದಾರೆ. ಇಂದು ವಿವಿಧಡೆ ದಾಳಿ ಮಾಡಿ 4500ರೂ. ದಂಡ ವಿಧಿಸಿದ್ದಾರೆ.

ಸಾರ್ವಜನಿಕರು ಸಹ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಸ್ನೇಹಿ ಚೀಲಗಳನ್ನ (Echo Friendly Bag) ಉಪಯೋಗಿಸುವಂತೆ ನಗರಸಭೆ ಆಯುಕ್ತ ಜಗದೀಶ ಹುಲಗೆಜ್ಜಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಂತೋಷ್ ಮನವಿ ಮಾಡಿದ್ದಾರೆ.

ಇದನ್ನು ಓದಿ : ಅಂಕೋಲಾದಲ್ಲಿ ಕಾರು ಪಲ್ಟಿ

ನಟ ಬಿಗ್ ಬಾಸ್ ಸ್ಪರ್ಧಿ ಪಡೆದ ಮತವೇಷ್ಟು

ಮುಂಡಗೋಡಿನಲ್ಲಿ ಮಂಗಳಮುಖಿಯರ ರಂಪಾಟ