ಸಾಗರ( SAGAR) : ಚಲಿಸುತ್ತಿದ್ದ ಸರ್ಕಾರಿ ಬಸ್ ( GOVERNMENT BUS) ಆಕಸ್ಮಿಕ ಬೆಂಕಿ ತಗುಲಿ ಆತಂಕ ಸೃಷ್ಟಿಸಿದ ಘಟನೆ ಸಾಗರ ಪಟ್ಟಣದ ಜೋಗ (JOGA) ರಸ್ತೆಯ ಬಳಿ ಸಂಭವಿಸಿದೆ.
ಸರ್ಕಾರಿ ಬಸ್ ಭಟ್ಕಳದಿಂದ ಬೆಂಗಳೂರು(BHATKAL -BANGLORE l) ಕಡೆ ತೆರಳುತಿತ್ತು ಎನ್ನಲಾಗಿದೆ. ಬಸ್ ನಲ್ಲಿ ಸುಮಾರು 12 ಪ್ರಯಾಣಿಕರಿದ್ದರು. ಬಸ್ ಗೆ ಬೆಂಕಿ ಹೊತ್ತಿರುವುದನ್ನ ಗಮನಿಸಿದ ಪ್ರಯಾಣಿಕರು ಅದೃಷ್ಟವಶಾತ್ ಅನಾಹುತದಿಂದ ಪಾರಾಗಿದ್ದಾರೆ.
ಕೆಲವೇ ಕ್ಷಣದಲ್ಲಿ ಬಸ್ ಬೆಂಕಿಯ (BUS FIRE) ಕೆನ್ನಾಲಿಗೆಗೆ ಸಿಲುಕಿದಾಗ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ. ಸಾಗರ ಪೊಲೀಸ್ ಠಾಣಾ (SAGAR POLICE STATION)ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.