ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಎಸ್.ಪಿ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಸುಳ್ಳು ಸುದ್ದಿ ಹರಡಿಸಿ ರಾಷ್ಟ್ರೀಯ ಹೆದ್ದಾರಿ(National Highway) ತಡೆ ಮತ್ತು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಹಲವು ಜನರ ಮೇಲೆ ಭಟ್ಕಳ(Bhatkal) ಶಹರ ಠಾಣೆಯಲ್ಲಿ ಪ್ರಕರಣ(Complaint) ದಾಖಲಾಗಿದೆ.
ಏಪ್ರಿಲ್ 08 ರಂದು ಭಟ್ಕಳ ಶಹರ ಪೊಲೀಸ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಹೊಂದಿರುವ ಶ್ರೀನಿವಾಸ ಮಾಸ್ವಪ್ಪ ನಾಯ್ಕ ಈತನ ಪೊಲೀಸ್ ಮೇಲಾಧಿಕಾರಿಗಳು ವಿಚಾರಣೆ ಕಾಲಕ್ಕೆ ಅನುಚಿತ ವರ್ತನೆ ಮಾಡಿದ್ದಾರೆ ಅಂತಾ ಸೋಶಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿಯನ್ನು(Fake News) ಹರಡಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವೆಂಕಟಪ್ಪ ನಾಯ್ಕ ತಲಗೇರಿ, ಜಾಲಿ, ಅಭಿಶೇಕ್ ತಿಮ್ಮಪ್ಪ ನಾಯ್ಕ, ಹನುಮಾನ ನಗರ ಭಟ್ಕಳ, ನಾಗೇಶ ನಾರಾಯಣ ನಾಯ್ಕ ಹೊನ್ನೆಗದ್ದೆ, ಭಟ್ಕಳ, ನಾಗೇಂದ್ರ ಶಂಕರ ನಾಯ್ಕ ಹೆರೂರ, ಎಳೆಬಾರ, ಭಟ್ಕಳ, ಲೋಕೇಶ ರವಿ ದೇವಾಡಿಗ ಮುಂಡಳ್ಳಿ ಭಟ್ಕಳ, ರವಿಕುಮಾರ ಶಶಿಕಾಂತ ಶೇಟ್ ವಿ ಟಿ ರಸ್ತೆ, ಸೋನಾರಕೇರಿ, ಭಟ್ಕಳ, ಈಶ್ವರ ದುರ್ಗಪ್ಪ ನಾಯ್ಕ, ಅಪ್ಪಮನೆ ತಲಾಂದ ಭಟ್ಕಳ, ಜಗದೀಶ ನಾರಾಯಣ ನಾಯ್ಕ ಕರಿಕಲ್, ಭಟ್ಕಳ, ಕೃಷ್ಟ ಮಾದೇವ ನಾಯ್ಕ ಕೇತಪ್ಪೆ ದೇವಸ್ಥಾನದ ಹತ್ತಿರ, ಮುಟ್ಟಳ್ಳಿ ಭಟ್ಕಳ, ನಾಗರಾಜ ತಂದೆ ಮಾದೇವ ಮೊಗೇರ, ಜಕಣಿಮನೆ, ಕರಿಕಲ್, ಭಟ್ಕಳ, ಜಗದೀಶ ಸೋಮಯ್ಯ ನಾಯ್ಕ ಬೆಣಂದೂರು, ಭಟ್ಕಳ ಹಾಗೂ ಇನ್ನೂಳಿದ 25-30 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಏಪ್ರಿಲ್ 8ರಂದು ರಾತ್ರಿ ಅಕ್ರಮ ಕೂಟವನ್ನು ಕಟ್ಟಿಕೊಂಡು ಭಟ್ಕಳದ ನೂರ ಪಳ್ಳಿ, ಹತ್ತಿರ ಭಟ್ಕಳ ದಂತಹ ಸೂಕ್ಷ್ಮ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಬರಹೋಗುವ ವಾಹನಗಳ ಸಂಚಾರಕ್ಕೆ ಅಡೆ-ತಡೆ ಮಾಡಿ ಪೊಲೀಸ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ ಬಗ್ಗೆ ಪ್ರಕರಣದಲ್ಲಿ ಉಲ್ಲೆಖಿಸಲಾಗಿದೆ.
ಶಿರಸಿಯಲ್ಲಿ ಎಸ್.ಪಿ ಎಂ. ನಾರಾಯಣ್ ರವರು ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕಗೆ ಪರೇಡ್ ನೆಪದಲ್ಲಿ ಹಲ್ಲೆ ಮಾಡಿರುವ ಆರೋಪ ಕುರಿತು ಪ್ರತಿಭಟನೆ ಮಾಡಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ನಂತರ ಭಟ್ಕಳ ಶಹರ ಠಾಣೆಗೆ ಮುತ್ತಿಗೆ ಹಾಕಿದ್ದರು. ಹೀಗಾಗಿ ಇಲಾಖೆಯಿಂದ ಕ್ರಮ ಎದುರಿಸಬೇಕಾಗಿದೆ.
ಇದನ್ನು ಓದಿ: ಮೀನುಗಾರ ಶಂಕಸ್ಪಾದ ಸಾವು. ಸ್ಥಳೀಯರ ಪ್ರತಿಭಟನೆ.
ಆನ್ಲೈನ್ ಪ್ರೇಮಕ್ಕೆ ಸಾಕ್ಷಿಯಾಯ್ತು, ಅಮೇರಿಕಾ ಯುವತಿ ಮತ್ತು ಆಂಧ್ರ ಯುವಕನ ಪ್ರೀತಿ.
ಭಾವಿ ಅತ್ತೆಯೊಂದಿಗೆ ಓಡಿ ಹೋದ ಅಳಿಯ. ವಧುವಿನ ಕುಟುಂಬದವರು ಕಂಗಾಲು.
ಯಾಸಿನ್ ಭಟ್ಕಳ್ ಸೇರಿ ಐವರಿಗೆ ಮರಣ ದಂಡನೆ ಫಿಕ್ಸ್. ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್.