ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ನವದೆಹಲಿ(Newdelhi): ಕನ್ನಡದ ಶ್ರೇಷ್ಠ ಹಿರಿಯ ನಟ ಅನಂತನಾಗ್(Senior Actor Anantnag) ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಘೋಷಿಸಲಾಗಿದೆ.

ಭಾರತೀಯ ಚಿತ್ರರಂಗ, ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ(Kannada Cinema Industry) ನೀಡಿದ ಅಪಾರ ಕೊಡುಗೆ ಹಾಗೂ ಸುದೀರ್ಘ ಸಿನಿ ಪಯಣಕ್ಕಾಗಿ ಅವರಿಗೆ ಪ್ರತಿಷ್ಠಿತ ಗೌರವ ಸಂದಿದೆ.

ಉತ್ತರಕನ್ನಡ(Uttarkannada) ಜಿಲ್ಲೆಯ ಭಟ್ಕಳ (Bhatkal)ತಾಲೂಕಿನ ಶಿರಾಲಿ(Shirali) ಅವರ ಮೂಲ ಊರಾಗಿದೆ. ಅವರ ಬಾಲ್ಯದ ಬಹುಭಾಗವೂ ಶಿರಾಲಿಯಲ್ಲಿ ಕಳೆದಿದ್ದು, ಆರಂಭಿಕ ಶಿಕ್ಷಣದ ಕೆಲವು ವರ್ಷಗಳು ಶಿರಾಲಿಯ ಚಿತ್ರಾಪುರ ಮಠದ ಆಶ್ರಯದಲ್ಲಿ ನಡೆದಿತ್ತು.

ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಘೋಷಣೆಯಾಗಿರೋದು ಉತ್ತರಕನ್ನಡ ಜಿಲ್ಲೆಯ ಜನರಿಗೆ ಹೆಮ್ಮೆ ಮೂಡಿಸಿದೆ. ಅನಂತನಾಗ್ ಅವರನ್ನು 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ರಾಜ್‌ಕುಮಾರ್(Dr Rajkumar) ಅವರ ಬಳಿಕ ಈ ಪ್ರತಿಷ್ಠಿತ ಗೌರವ ಪಡೆಯುತ್ತಿರುವ ಕನ್ನಡದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

1995 ರಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತ್ತು. ಮೂರು ದಶಕಗಳ ಬಳಿಕ ಕನ್ನಡದ ಮತ್ತೋರ್ವ ಹಿರಿಯ ನಟನಿಗೆ ಗೌರವ ದೊರೆತಂತಾಗಿದೆ.

ಬಹುಭಾಷಾ ಕಲಾವಿದರಾದ(Multi language Artist) ಅನಂತನಾಗ್ ಅವರು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಹಲವು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

 

ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕ್ತಾ ನಗರ (Gujarat Aktanagar)(ಕೆವಾಡಿಯಾ)ದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನವಾಗಲಿದೆ.

ಪ್ರಶಸ್ತಿ ಘೋಷಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಅನಂತ್ ನಾಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಸಹಜ ಅಭಿನಯ, ವೈವಿಧ್ಯಮಯ ಪ್ರತಿಭೆ ಹಾಗೂ ಹಲವು ದಶಕಗಳ ಸಿನಿ ಪಯಣವನ್ನು ಮೋದಿ ಶ್ಲಾಘಿಸಿ ಕೊಂಡಾಡಿದ್ದಾರೆ.