ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಮುರ್ಡೇಶ್ವರ(Murdeshwar) : ಅಪ್ರಾಪ್ತ ವಯಸ್ಸಿನ ಬಾಲಕನಿಗೆ(Minor Boy) ದ್ವಿಚಕ್ರ ವಾಹನ ಚಾಲನೆಗೆ ಕೊಟ್ಟ ಪ್ರಕರಣದಲ್ಲಿ ವಾಹನದ ಮಾಲೀಕರೋರ್ವರಿಗೆ ನ್ಯಾಯಾಲಯ(Court) ರೂ.25,000 ದಂಡ(Fine) ವಿಧಿಸಿ ತೀರ್ಪು ನೀಡಿದ ಘಟನೆ ನಡೆದಿದೆ.
ಮುರ್ಡೇಶ್ವರ ಪೊಲೀಸ್ ಠಾಣಾ(Murdeshwar Police Station) ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣದಲ್ಲಿ, ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕನಿಂದ ಚಾಲನೆ ಮಾಡಿಸಿದ ಆರೋಪದಡಿ ಬಸ್ತಿ ಕಾಯ್ಕಿಣಿ ನಿವಾಸಿ ರಾಜೇಶ ನಾಗಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪಿ.ಎಸ್.ಐ ಹಣಮಂತ ಬಿರಾದಾರ ಅವರು ಮೋಟಾರ್ ವಾಹನ ಕಾಯ್ದೆಯ(Motor Vehicle Rules) ಕಲಂ 5 ಹಾಗೂ 199(ಎ) ಅನ್ವಯ ದೋಷಾರೋಪಣಾ ಪತ್ರವನ್ನು ಭಟ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಾಹನದ ಮಾಲೀಕ ರಾಜೇಶ ನಾಗಪ್ಪ ನಾಯ್ಕ ಅವರಿಗೆ ರೂ.25 ಸಾವಿರ ದಂಡ ವಿಧಿಸಿದೆ. ಅಪ್ರಾಪ್ತನಿಗೆ ವಾಹನ ನೀಡಿದ್ದಕ್ಕಾಗಿ ತಂದೆಗೆ ದಂಡ ವಿಧಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ಅಪ್ರಾಪ್ತರಿಗೆ ವಾಹನ ನೀಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು ಅಲ್ಲಲ್ಲಿ ಬೈಕ್ ಓಡಿಸುತ್ತಿರೋದು ಬೆಳಕಿಗೆ ಬರುತ್ತಿದೆ.
ಇದನ್ನು ಓದಿ : ತಾಯಿಯೊಂದಿಗೆ ನಗುನಗುತಾ ಮಾತಾಡುತ್ತಿದ್ದ ಮಗಳ ಸಾವು. ಪೋಷಕರಿಗೆ ಶಾಕ್.
