ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಬೆಂಗಳೂರು(Bangalore) : ಹೆತ್ತಮ್ಮನಜೊತೆ ನಗುತ್ತಾ ಮಾತನಾಡುತ್ತಿದ್ದಾಗಲೇ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ನಡೆದಿದೆ.
ಹಾಸನ ಮೂಲದ(Hasan Native) ಶ್ವೇತಾ (25) ಎಂಬಾಕೆ ಅಕಾಲಿಕವಾಗಿ ಮೃತಪಟ್ಟ ಟೆಕ್ಕಿ. ಇವರು ಬೆಂಗಳೂರಿನ ಕಂಪನಿಯಲ್ಲಿ(Bangalore Company) ಕೆಲಸ ಮಾಡುತ್ತಿದ್ದರು. ವೀಕೆಂಡ್‌ನ್ನು(Weekend) ತಂದೆ ತಾಯಿ ಜೊತೆ ಕಳೆಯಲು ಹಾಸನಕ್ಕೆ ಬಂದಿದ್ದರು ಎನ್ನಲಾಗಿದೆ.
ತನ್ನ ಅಮ್ಮನ ಜೊತೆ ನಗುನಗುತಾ ಮಾತಾಡ್ತಾ ಇದ್ದ ಶ್ವೇತಾ ಇದ್ದಕ್ಕಿದ್ದಂತೆಯೇ ಕುಸಿದುಬಿದ್ದರು. ಅವರಿಗೆ ಮಾತನಾಡಲು ಆಗಲಿಲ್ಲ. ನಂತರ ಪೋಷಕರು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆ ವೇಳೆಗಾಗಲೇ ಶ್ವೇತಾ ಕೋಮಾಗೆ ಜಾರಿ ಬಿಟ್ಟಿದ್ದರು.
ದಾರಿ ಮಧ್ಯದಲ್ಲಿಯೇ ಶ್ವೇತಾ ಮೆದುಳು ನಿಷ್ಕ್ರಿಯಗೊಂಡಿದೆ(Brain dead). ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಆಕೆಯ ಅಂಗಾಂಗ(Organs) ದಾನಕ್ಕೆ ನಿರ್ಧರಿಸಿದ್ದಾರೆ. ಅಂಗಾಗಳನ್ನು ಅವಶ್ಯಕತೆ ಇರುವವರಿಗೆ ನೀಡಿ, ಅವರಲ್ಲಿ ತೃಪ್ತಿ ಕಾಣಲು ಮುಂದಾಗಿದ್ದರು. ಆದರೆ ಇಂದು ಬೆಳಗ್ಗೆ ಶ್ವೇತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದೀಗ ಶ್ವೇತಾ ಅಂಗಾಂಗ ದಾನವೂ ಮಾಡಲು ಅಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.
ಯಾವ ರೋಗ ಲಕ್ಷಣವೂ ಇಲ್ಲದೆ, ಆಸ್ಪತ್ರೆಯ ಮೆಟ್ಟಿಲೇ ಹತ್ತದ ತನ್ನ ಮಗಳು ಒಂದೇ ಕ್ಷಣದಲ್ಲಿ ನಮ್ಮನ್ನು ಅಗಲಿರುವುದು ಪೋಷಕರು ದುಃಖ ಹೆಚ್ಚಾಗುವಂತೆ ಮಾಡಿದೆ. ಹಾಸನದಲ್ಲಿ ಶ್ವೇತಾ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನು ಓದಿ : ಕಾರವಾರ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ. ಮಹಿಳೆಯರ ಕಾರ್ಯಕ್ಕೆ ಪ್ರಶಂಸೆ.
