ಶಿರಸಿ(Sirsi) : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಶಿರಸಿ ತಾಲೂಕಿನ (Sirsi Taluku) ಕುಪ್ಪಗಡ್ಡೆಯ ಸುನೀಲ್ ಸುರೇಶ ಬೋವಿವಡ್ಡರ ಶಿಕ್ಷೆಗೆ ಒಳಗಾದವ. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಶ್ರೀಮತಿ ಪ್ರತಿಭಾ ಬಂಡುರಾವ್ ಕುಲಕರ್ಣಿ ಅವರು 20 ವರ್ಷ ಶಿಕ್ಷೆ ಹಾಗು 1ಲಕ್ಷ ರೂ ದಂಡ ರೂ ವಿಧಿಸಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣೆಯಲ್ಲಿ (Banavasi Police station) ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ(Sexual Harrasment) ಏಸಗಿದ ಬಗ್ಗೆ 12-11-2021 ಪ್ರಕರಣ ದಾಖಲಾಗಿತ್ತು. ಸರಕಾರಿ ಅಭಿಯೋಜಕ ಶ್ರೀಮತಿ ಶುಭಾ ಗಾಂವಕರ್ ಹಾಗು ಶ್ರೀಮತಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಅಂದಿನ ಸಿಪಿಆಯ್ ರಾಮಚಂದ್ರ ನಾಯಕ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಇದನ್ನು ಓದಿ : ಬಿಜೆಪಿ ಜೆಡಿಎಸ್ ಮೈತ್ರಿಗೆ ಸೋಲು. ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ