ಕಾರವಾರ : ಕಾಳಿ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ಕದ್ರಾ ಮತ್ತು ಸುಪಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.
ಕದ್ರಾ ಅಣೆಕಟ್ಟಿನಿಂದ ಒಟ್ಟು 57 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಎಂಟು ಗೇಟ್ ಗಳನ್ನ ತೆರೆದು ನಿರಂತರವಾಗಿ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಜಲಾಶಯದ ಒಟ್ಟು ಮಟ್ಟ 34.50 ಮೀಟರ್ ಇದ್ದು, ಇಂದು ನೀರಿನ ಮಟ್ಟ 31.37ಮೀಟರ್ ತುಂಬಿದೆ. ಮತ್ತೆ ನೀರಿನ ಒಳಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆಣೆಕಟ್ಟಿನಿಂದ ನೀರು ಹೊರಕ್ಕೆ ಹಾಕಲಾಗುತ್ತಿದೆ. ಹೀಗಾಗಿ ಕಾಳಿ ನದಿಯ ಎಡ ಮತ್ತು ಬಲದಂಡೆ ಪ್ರದೇಶದ ನಿವಾಸಿಗಳ ನಾಗರಿಕರಲ್ಲಿ ನಡುಕ ಶುರುವಾಗಿದೆ.