ಅಂಕೋಲಾ : ‘ಮಾತನಾಡುವ ಮಂಜುನಾಥ’ ಎಂದು ನಾಡಿನ ಭಕ್ತರಿಂದ ಕರೆಸಿಕೊಳ್ಳುವ ಧರ್ಮಸ್ಥಳದ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಆಗಸ್ಟ್ 13ರಂದು ಅಂಕೋಲಾ ತಾಲೂಕಿನ ಉಳುವರೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಜುಲೈ 16 ರಂದು ಶಿರೂರು ಗುಡ್ಡ ಕುಸಿತದ ಘಟನೆಯಿಂದಾಗಿ ಉಳುವರೆಯ ಹಾಲಕ್ಕಿ ಸಮುದಾಯದ ಹಲವು ಮನೆಗಳು ನೆಲಸಮವಾಗಿದ್ದವು. ಗ್ರಾಮದ ಸಣ್ಣಿ ಗೌಡ ಎಂಬಾಕೆ ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಳು. ಹಲವರನ್ನ ಗ್ರಾಮದ ಕೆಲವರು ರಕ್ಷಣೆ ಮಾಡಿದ್ದರು.

ನೆಲೆ ಕಳೆದುಕೊಂಡ ಕುಟುಂಬಗಳು ಸೂಕ್ತ ಆಶ್ರಯವಿಲ್ಲದೆ ಸಂಬಂಧಿಕರ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಡ ಕುಟುಂಬಗಳು ಅನುಭವಿಸುತ್ತಿರುವ ವಿಷಯ ತಿಳಿದ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಂತ್ರಸ್ತ ಕುಟುಂಬದ ನೋವಿಗೆ ಸ್ಪಂದಿಸಲು ಮುಂದಾಗಿದ್ದಾರೆ. ಆಗಸ್ಟ್  13ರಂದು ಉಳುವರೆ ಗ್ರಾಮಕ್ಕೆ ಭೇಟಿ ನೀಡಲಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಹೆಗ್ಗಡೆ ಅವರು ತಮ್ಮ ಯೋಜನೇಯಡಿ ಗ್ರಾಮದ ನಾಗರಿಕರಿಗೆ ಮಹತ್ವದ ಯೋಜನೆಗಳನ್ನ ಘೋಷಿಸುವ ಸಾಧ್ಯತೆ ಇದೆ.