ಅಂಕೋಲಾ : ತಾಲೂಕಿನ ಶಿರೂರು  ಗುಡ್ಡ ಕುಸಿತ ಘಟನೆಗೆ ಸಂಭಂದಿಸಿ ಇಂದು ಗಂಗಾವಳಿ ನದಿಯಲ್ಲಿ ಮತ್ತೆ ಕಾರ್ಯಾಚರಣೆ ನಡೆಯಲಿದೆ.

ಕೇರಳದ ಅರ್ಜುನ್, ಜಗನ್ನಾಥ ಮತ್ತು ಲೋಕೇಶ್ ಅವರ ದೇಹಗಳ ಹುಡುಕಾಟ ನಡೆಸುವ ಪ್ರಯತ್ನ ನಡೆಯಲಿದೆ. ನೇವಿ ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಸಲು ಜಿಲ್ಲಾಡಳಿತ ಯೋಚಿಸಿದೆ.

ಜುಲೈ 16 ರಂದು ನಡೆದಿದ್ದ ಶಿರೂರಿನಲ್ಲಿ ಬಾರೀ ಪ್ರಮಾಣದ ಭೂ ಕುಸಿತವಾಗಿ ಕೇರಳದ ಲಾರಿ, ಚಾಲಕ ಸೇರಿ ಒಟ್ಟು 11 ಜನ ನಾಪತ್ತೆಯಾಗಿದ್ದರು. ಒಟ್ಟು ಎಂಟು ಮೃತ ದೇಹಗಳು ದೊರೆತಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದರು.

14 ದಿನಗಳ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ಮತ್ತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಲಿದೆ.

ಇಂದಿನ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಸಹಕಾರವನ್ನ ಇವರೆಗೂ ಜಿಲ್ಲಾಡಳಿತ ಕೋರಿಲ್ಲ. ಆದರೂ ಸಹ ಮೂವರಿಗೋಸ್ಕರ ಈಶ್ವರ್ ಮಲ್ಪೆ ಪ್ರಯತ್ನಿಸುವ ಸಾಧ್ಯತೆ ಇದೆ.