ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ/ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಪೆಂಗಲ್ ಚಂಡಮಾರುತದ ಪರಿಣಾಮ ತಟ್ಟಿದೆ.  ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂಜಾಗೃತೆಯಾಗಿ ಡಿಸೆಂಬರ್ 3ರಂದು ಉಡುಪಿ ಜಿಲ್ಲೆಯ(Udupi District) ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು(1-12ನೇ ತರಗತಿವರೆಗೆ) ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಇರುರುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಫೆoಗಲ್‌ ಚಂಡಮಾರುತ(Phengal Cyclone) ತಮಿಳುನಾಡಿನಲ್ಲಿ(Tamilunadu) ಭಾರೀ ಮಳೆ ಸುರಿಸಿ  ಅನಾಹುತ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯದಲ್ಲೂ ಪರಿಣಾಮ ಬೀರಬಹುದು ಎಂದು ಭಾರತೀಯ ಹವಾಮಾನ ಇಲಾಖೆ(Indian Metrology Department) ತಿಳಿಸಿದೆ.

ಉಡುಪಿ(Udupi), ದಕ್ಷಿಣ ಕನ್ನಡ(Dakshinakannada), ಕೊಡಗು(Kodagu) ಹಾಗೂ ಕಾಸರಗೋಡು (Kasaragodu) ಜಿಲ್ಲಾದ್ಯಂತ ಸೋಮವಾರ ಕೆಲವೆಡೆ ಭಾರೀ ಮಳೆಯಾಗಿದ್ದು, ಮಂಗಳವಾರವೂ  ಮಳೆ ಮುಂದುವರಿಯುವುದರಿಂದ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್(Orange Alert) ಘೋಷಣೆ ಮಾಡಲಾಗಿದೆ. 

ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವುದು. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

ತುರ್ತು ಸೇವೆಗೆ 24×7 ಕಂಟ್ರೋಲ್ ರೂಂ 1077/ 0824-2442590, ಮಂಗಳೂರು- 0824-2220587, ಉಳ್ಳಾಲ – 0824-2204424, ಬಂಟ್ವಾಳ ತಾಲೂಕು – 08255 -232500, ಪುತ್ತೂರು ತಾಲೂಕು – 08251-230349, ಬೆಳ್ತಂಗಡಿ ತಾಲೂಕು-08256-232047, ಕಡಬ- 08251-260435, ಸುಳ್ಯ ತಾಲೂಕು – 08257-231231, ಮೂಡಬಿದ್ರೆ ತಾಲೂಕು – 08258-238100, ಮುಲ್ಕಿ ತಾಲೂಕು – 0824-2294496 ಸಂಪರ್ಕಿಸಲು ಸೂಚನೆ ನೀಡಿದ್ದು, ಜಿಲ್ಲೆಯ ಜನತೆ ಎಚ್ಚರಿಕೆ ವಹಿಸಬೇಕಾಗಿದೆ.

ಇನ್ನೂ ಮಳೆಯ ಕಾರಣಕ್ಕೆ ಮಂಡ್ಯ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮಂಗಳೂರು ಕೋಲಾರ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಇದನ್ನು ಓದಿ : ಬಾಲಕನ ಜೀವ ತೆಗೆದ ಬಲೂನ್

ರಸ್ತೆ ಅಪಘಾತದಲ್ಲಿ ಯುವ ಪೊಲೀಸ್ ಅಧಿಕಾರಿ ದುರ್ಮರಣ

ಹಸು ಹುಡುಕಲು ಹೋದ ಮೂವರು ಮಹಿಳೆಯರು ನಾಪತ್ತೆ

ಈಜಲು ತೆರಳಿದ ಇಬ್ಬರು ಸ್ನೇಹಿತರ ಸಾವು