ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara  digital news)ಬೆಳಗಾವಿ(Belagavi) :  ಚಳಿಗಾಲದ ಅಧಿವೇಶನ(Winter Session) ನಡೆಯುತ್ತಿರುವ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ    ಬೆಳಗಾವಿಯಲ್ಲಿ ರೈತರು ಪ್ರತಿಭಟನೆ(Farmers Protest) ನಡೆಸಿದ್ದಾರೆ.

ಸುವರ್ಣ ವಿಧಾನಸೌಧ (Suvarn Vidhanasoudha) ಮಾರ್ಗದ ಹಲಗಾ(Halaga) ಬಳಿ ರಾಷ್ಟ್ರೀಯ ಹೆದ್ದಾರಿಯ(National Highway) ಸರ್ವಿಸ್ ರಸ್ತೆ ತಡೆದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರನ್ನ ದಾಟಿ ಮುಂದಕ್ಕೆ ಬಂದ ಸರ್ಕಾರಿ ಬಸ್ಗಳನ್ನ ಅಡ್ಡಗಟ್ಟಿದ ಪ್ರತಿಭಟನಾಕಾರರು  ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗಿಗೆ ಕಟ್ಟಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಕಬ್ಬಿಗೆ ಸೂಕ್ತ ದರ ನಿಗದಿ, ಕನಿಷ್ಠ ಬೆಂಬಲ ಬೆಲೆ, ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ(Kalasa Bandoori) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ನಡೆಸಿದ್ದರು. ಅಧಿವೇಶನದ ಆರಂಭದ ದಿನವೇ ರೈತರು ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಇದನ್ನು ಓದಿ : ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ವಿರೋಧ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಸಕರ ಕಾರು – ಬೈಕ್ ಅಪಘಾತ.

ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿರುವ ಖಾಸಗಿ ಬಸ್ ಪಲ್ಟಿ.

ಅರಬ್ಬೀ ಸಮುದ್ರದಲ್ಲಿ ಆಯಾ ತಪ್ಪಿ ಬಿದ್ದ ಮೀನುಗಾರ.  ಮೃತದೇಹಕ್ಕಾಗಿ ಮೀನುಗಾರರ ಕಾರ್ಯಾಚರಣೆ