ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕೊಲ್ಲೂರು(Kolluru) : ತಮಿಳುನಾಡಿನ ನೂತನ ಮುಖ್ಯಮಂತ್ರಿ(Tamilunadu CM) ಜೋಸೆಫ್ ವಿಜಯ್(Joseph Vijay)  ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ(Kolluru Mookambika Temple) ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಧ್ಯಾಹ್ನ ಆಗಮಿಸಿದ ವಿಜಯ್ ಅವರನ್ನು  ದೇವಾಲಯದ ವತಿಯಿಂದ ಪೂರ್ಣಕುಂಭದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ದೇವಾಲಯ ಪ್ರವೇಶಕ್ಕೂ ಮುಂಚೆ   ಅವರು ಧ್ವಜಸ್ತಂಭಕ್ಕೆ ನಮಸ್ಕರಿಸಿ  ಒಳಪ್ರವೇಶಿಸಿದರು. ಬಳಿಕ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರು  ಶ್ರೀ ಮೂಕಾಂಬಿಕಾ ದೇವಿಗೆ (Sri Mookambika Devi) ವಿಜಯದ ಸಂಕೇತವಾದ ಬೆಳ್ಳಿಯ ಖಡ್ಗವನ್ನು ಸಮರ್ಪಿಸಿದರು. ಅರ್ಚಕರು ದೇವಿಯ ಸನ್ನಿಧಿಯಲ್ಲಿ ಅರ್ಗಳಾ ಸ್ತೋತ್ರ ಪಠಿಸಿ ವಿಜಯ್ ಅವರ ಕೈಗೆ ರಕ್ಷಾ ದಾರ ಕಟ್ಟಿದರು. ಸಂಕಲ್ಪ ಪೂಜೆ ಬಳಿಕ ಶ್ರೀ ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದ ಜೋಸೆಫ್ ವಿಜಯ್(Joseph Vijay) ಅವರು ವಾಪಾಸ್ ತೆರಳುವಾಗ ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂತು.

ತಮಿಳುನಾಡಿನಲ್ಲಿ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ(Jayalalita) ಹಾಗೂ  ಎಂ.ಜಿ.ಆರ್(MGR)  ಅವರ ಹಾದಿಯಲ್ಲೇ ವಿಜಯ್ ಕೂಡ ಕೊಲ್ಲೂರಿಗೆ ಬಂದಿದು ದೇವಿಗೆ ಬೆಳ್ಳಿಯ ಖಡ್ಗವನ್ನ ಕಾಣಿಕೆಯಾಗಿ ನೀಡಿರುವುದು ವಿಶೇಷವಾಗಿದೆ.

ಇದನ್ನು ಓದಿ : ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದಲೇ ಆರ್.ಎಸ್‌.ಎಸ್ ಹತ್ತಿಕ್ಕಲು ಆಗಿಲ್ಲ. ನಿಮ್ಮಿಂದ ಆಗುತ್ತಾ? ಪ್ರಿಯಾಂಕ್ ಖರ್ಗೆಗೆ ಕಾಗೇರಿ ಪ್ರಶ್ನೆ.