ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಯಲ್ಲಾಪುರ(Yallapur) : ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿ ರಸ್ತೆ ಬದಿಯಲ್ಲಿ ಮೀನು ಮಾರಾಟ(Fish Sale) ಮಾಡುತ್ತಿದ್ದ ಮಹಿಳೆಯ ಮೇಲೆ ಬೈಂದೂರಿನ ಪುರಸಭೆ ಮುಖ್ಯಾಧಿಕಾರಿ (Bainduru CMC Chief Officer) ಹಲ್ಲೆ ನಡೆಸಿದ್ದಾರೆನ್ನಲಾದ ಆಕ್ರೋಶದ ಘಟನೆ ನಡೆದಿದೆ.

​ಮೂಲತಃ ಯಲ್ಲಾಪುರ ಮಂಚಿಕೇರಿಯವರಾದ (Yallapur Manchikeri Native), ಪ್ರಸ್ತುತ ಬೈಂದೂರಿನಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯ್ ಭಂಡಾರ್ಕರ್ ಹಲ್ಲೆ ನಡೆಸಿದ ಆರೋಪಿ ಅಧಿಕಾರಿ.

ಅಂಕೋಲಾ(Ankola) ತಾಲೂಕಿನ ಬೇಲೇಕೇರಿಯ (Belekeri) ಮೀನುಗಾರ ಮಹಿಳೆಯೊಬ್ಬರು ಯಲ್ಲಾಪುರದ ಮಂಚಿಕೇರಿ(Yallapur Manchikeri) ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿ ಅಜಯ್ ಭಂಡಾರ್ಕರ್, ಮಹಿಳೆಯೊಂದಿಗೆ ಜಗಳ ತೆಗೆದು ಸಾರ್ವಜನಿಕರೆದುರೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರಲ್ಲದೆ, ಮೀನಿನ ಬುಟ್ಟಿಯನ್ನು ನೆಲಕ್ಕೆ ಕೆಡವಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪಕ್ಕದಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಮಹಿಳೆಯ ಮೇಲೆಯೂ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗೆ ಸಾರ್ವಜನಿಕರಿಂದ ಗೂಸಾ: ಅಧಿಕಾರಿಯ ಈ ದುಂಡಾವರ್ತನೆಯನ್ನು ಕಂಡು ಆಕ್ರೋಶಗೊಂಡ ಸ್ಥಳೀಯರು ಹಾಗೂ ಸಾರ್ವಜನಿಕರು ಆತನನ್ನು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆಯೂ ಅಧಿಕಾರಿ ಹಲ್ಲೆಗೆ ಮುಂದಾದಾಗ, ಕೋಪಗೊಂಡ ಸ್ಥಳೀಯರು ಅಧಿಕಾರಿಗೆ ತಕ್ಕ ಶಾಸ್ತಿ ಮಾಡಿ ಧರ್ಮದೇಟು ನೀಡಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅಧಿಕಾರಿ ಸಾರ್ವಜನಿಕವಾಗಿ ದರ್ಪ ಮೆರೆದಿರುವುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ. ಸ್ಥಳೀಯರು ಸಮಧಾನಿಸಲು ಪ್ರಯತ್ನಿಸಿದರೂ ಕೂಡ ಸ್ಥಳೀಯರ ಮೇಲೆ ಅಧಿಕಾರಿ ಹಲ್ಲೆಗೆ ಮು