ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar) : ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಕಾರವಾರ ಇದರ 2025-26ನೇ ಸಾಲಿನ 66 ನೇ ವಾರ್ಷಿಕ
ಸರ್ವಸಾಧಾರಣ ಸಭೆ ಕಾರವಾರದ ಸಾಗರ ದರ್ಶನ ಹಾಲ್ ನಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ  ಇತ್ತೀಚಿಗೆ ಅಗಲಿದ  ಫೆಡರೇಶನ್ ಮಾಜಿ ಉಪಾಧ್ಯಕ್ಷರಾದ ಕೆ ಟಿ ತಾಂಡೇಲ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಫೆಡರೇಶನ್ ಅಧ್ಯಕ್ಷ ಪ್ರಶಾಂತ ತುಕಾರಾಮ ತಾಂಡೇಲ ವಹಿಸಿ, ಫೆಡರೇಶನ್ ನ ಪ್ರಗತಿಯ ವರದಿಯನ್ನು ಸದಸ್ಯರ ಮುಂದಿಟ್ಟರು. ಮಾರ್ಚ 2026 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಫೆಡರೇಶನ್ ರೂ. 84.06 ಲಕ್ಷ ದಷ್ಟು ವ್ಯಾಪಾರಿ ಲಾಭ ಗಳಿಸಿದೆ ಎಂದರು.

ಫೆಡರೇಶನ್ ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ. ನಿರ್ವಹಣಾ ವೆಚ್ಚ ಹೊಗಲಾಡಿಸಿ ಒಟ್ಟು 4.56 ಲಕ್ಷ ಲಾಭ ಬಂದಿರುತ್ತದೆ ಎಂದ ಅವರು, ಫೆಡರೇಶನ ಸರ್ಕಾರದ ಯೋಜನೆಯಡಿ ಮೀನುಗಾರ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಮತ್ಸ್ಯ ಮಹಿಳಾ ಆವರ್ತಕ ನಿಧಿ ಹಾಗೂ ಸದಸ್ಯರ ಮೀನುಗಾರರ ಸಹಕಾರ ಸಂಘಗಳಿಗೆ ಪಾಲು ಬಂಡವಾಳ ಮೊತ್ತವನ್ನು ವಿತರಿಸುವ ಕಾರ್ಯವು ಮುಂದುವರೆಯುತ್ತದೆ ಎಂದು
ತಿಳಿಸಿದರು.

ಸಂಸ್ಥೆಯು ಸತತವಾಗಿ ಲಾಭದತ್ತ ಮುಂದುವರೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆಯು ಲಾಭದತ್ತ ಸಾಗಲು ಸದ್ಯಸರು ಕೈಜೋಡಿಸಬೇಕೆಂದು ಸಭೆಯಲ್ಲಿ ಹೇಳಿದರು. ಸಂಸ್ಥೆಯ ಮುಂದಿನ 2026-27 ನೇ ಸಾಲಿನಲ್ಲಿ ಫೆಡರೇಶನ ಕೈಗೊಳ್ಳಬಹುದಾದ ಹೊಸ ಯೋಜನೆಗಳನ್ನು ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿದರು.

ಮೊದಲನೇಯದಾಗಿ ಫೆಡರೇಶನ್ ಕೇಂದ್ರ ಕಛೇರಿ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡುವುದು. 20 ಕೆಎಲ್ ಸಾಮರ್ಥ್ಯದ ಹೊಸ ಡಿಸೇಲ್ ಟ್ಯಾಂಕರ್ ಖರೀದಿ ಮಾಡುವದು. ಮೀನುಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ
ನೀಡುವ ಸಲುವಾಗಿ ಬ್ಯಾಂಕಿಂಗ್ ಮಾಡುವುದರ ಬಗ್ಗೆ, ಹೊನ್ನಾವರ ಡಿಸೇಲ್ ಬಂಕ್ ಹತ್ತಿರ ಹೊಸ ಮಂಜುಗಡ್ಡೆ ಸ್ಥಾವರ ಸ್ಥಾಪನೆ ಮಾಡುವ ಬಗ್ಗೆ ತಿಳಿಸಿದರಲ್ಲದೇ ನಾಲ್ಕು ವಿಷಯಕ್ಕೆ ಸಂಬಂಧಿಸಿದಂತೆ ಹಾಜರಿದ ಸದಸ್ಯರು ಸರ್ವಾನುಮತದಿಂದ ಪ್ರಸ್ತಾವನೆಗೆ ಅನುಮೋದನೆ ನೀಡಿದರು .

ಸಭೆಗೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಫೆಡರೇಶನ್ ಸಿಬ್ಬಂದಿ ಗಜೇಂದ್ರ ಆರ್.
ಬಾನಾವಳಿ, ಸನ್ 2025-26 ನೇ ಸಾಲಿನ ವರದಿ ವಾಚನ ಹಾಗೂ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಗಳನ್ನು ಓದಿದರು.

ಫೆಡರೇಶನ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಗತ್ಯ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು. ಫೆಡರೇಶನ್ ಸದಸ್ಯರು ಹೊಂದಿರುವ ಬೋಟಗಳ ಮುಖಾಂತರ ಸನ್ 2025-26ನೇ ಸಾಲಿನಲ್ಲಿ ಅತಿ ಹೆಚ್ಚಿನ ಶೆಟ್ಲೆ ಮಾರ್ಕೆಟಿಂಗ್ ಮಾಡಿರುವ ಸದಸ್ಯರಾದ ಸೀತಾ ನಾರಾಯಣ ಖಾರ್ವಿ ಬೋಟ್ ಸಚಿನ್ ತೀರ್ಥ ಇವರಿಗೆ ಮೊದಲನೇ ಬಹುಮಾನ, ವಿಜಯಲಕ್ಷ್ಮೀ ವೆಂಕಟೇಶ ತಾಂಡೇಲ, ಬೋಟ್ ವಿಜಯದುರ್ಗಾ ಇವರಿಗೆ ಎರಡನೇ ಬಹುಮಾನ, ದೇವರಾಜ ಜನೋಭಾ ತಾಂಡೇಲ, ವೀರ ಗಣಪತಿ 2 ಬೋಟ್ ಇವರಿಗೆ ಮೂರನೇ ಬಹುಮಾನ, ಶ್ರೀಕಾಂತ ಪಾಟು ತಾಂಡೇಲ, ನಿಖಿತ ಸಾಗರ ಬೋಟ್ ಇವರಿಗೆ ನಾಲ್ಕನೇ ಬಹುಮಾನ, ಸುವರ್ಣಾ ವಿಜಿತ ಹರಿಕಂತ್ರ, ಶ್ರೀ ದುರ್ಗಾಲಕ್ಷ್ಮೀ ಬೋಟ್ ಇವರಿಗೆ ಐದನೇ ಬಹುಮಾನ ನೀಡಲಾಯಿತು.

ಪರ್ಶಿನ್ ಬೋಟ್ ವಿಭಾಗದಲ್ಲಿ ಅತೀ ಹೆಚ್ಚು ಮೀನು ಮಾರ್ಕೆಟಿಂಗ್ ಮಾಡಿದ ತದಡಿಯ ಅಬ್ದುಲ್ ಹುಸೇನ್ ಶಮಾಲಿ ಬೋಟ್ ಅಲಅಕ್ಷಾ ಪ್ರಥಮ ಬಹುಮಾನ ಮತ್ತು ಜಕ್ರೀಯಾ ಇಸಾಕ್ ಸಾಬ ಬೋಟ್ ಅಲಮಾಸ ಅವರಿಗೆ ದ್ವೀತಿಯ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಉತ್ತಮ ಶಾಖಾ ಪ್ರಶಸ್ತಿಯನ್ನು ಡಿಸೇಲ್ ಬಂಕ್ ಹೊನ್ನಾವರ ಶಾಖೆ ಇವರಿಗೆ
ನೀಡಲಾಯಿತು.

ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಪ್ರಮೋಧ
ರಮೇಶ ಬಾನಾವಳಿಕರ, ನಿರ್ದೇಶಕರುಗಳಾದ ವೆಂಕಟೇಶ ಈರಾ ತಾಂಡೇಲ, ಗಣಪತಿ ರಾಮಾ ಮಾಂಗ್ರೇ, ಪ್ರಶಾಂತ ಗಣಪತಿ ಹರಿಕಂತ್ರ, ಸಂಪತ ಮಾದೇವ ಹರಿಕಂತ್ರ, ಬೀರಪ್ಪ ಈರಾ ಹರಿಕಂತ್ರ, ವಿಠ್ಠಲ ಶನಿಯಾರ ದೈಮನೆ, ದಿವಾಕರ ದಾಸಿ ಮೊಗೇರ, ಗೋವಿಂದ ಎಚ್. ತಾಂಡೇಲ, ಶ್ರೀಧರ ಮಹಾಬಳೇಶ್ವರ ಹರಿಕಂತ್ರ, ಶ್ರೀಮತಿ ಸವಿತಾ ನೀತಿನ ಗಾಂವಕರ, ಶ್ರೀಮತಿ ವರ್ಷಾ ರಾಮನಾಥ ಬೇಳೂರಕರ ಮತ್ತು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ತಳೇಕರ ಉಪಸ್ಥಿತರಿದ್ದರು.

ಫೆಡರೇಶನ್ ಸಂಸ್ಥೆಯ ವಿವಿಧ ಶಾಖೆಯ ಸಿಬ್ಬಂದಿಗಳು ಮತ್ತು ಕೇಂದ್ರ ಕಛೇರಿ ಸಿಬ್ಬಂದಿಗಳು ಹಾಗೂ ಫೆಡರೇಶನ್ ಸಂಸ್ಥೆಯ ಸರ್ವ ಸದ್ಯಸರು ಹಾಜರಿದ್ದರು. ಎಲ್ಲರನ್ನು ಫೆಡರೇಶನ್ ಕಾರ್ಯದರ್ಶಿ ಗಜೇಂದ್ರ ಆರ್. ಬಾನಾವಳಿ ಅವರು ಕೊನೆಯಲ್ಲಿ ವಂದಿಸಿದರು.