ಕಾರವಾರ(Karwar) : ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕ ಬೆಂಕಿ(Fire) ಹೊತ್ತಿಕೊಂಡು ಆತಂಕ ಮೂಡಿಸಿದ ಘಟನೆ ಕಾರವಾರದ ಕಾಜುಭಾಗ ರಸ್ತೆಯಲ್ಲಿ (Kajubhag Road)ಸಂಭವಿಸಿದೆ.
ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ (Police headquarters) ಸಮೀಪವೇ ಈ ಘಟನೆ ನಡೆದಿದೆ. ಅವಘಡದಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ವಿಲಾಸ ಅಣ್ವೇಕರ್ ಎಂಬುವವರಿಗೆ ಸೇರಿದ ಜೆನ್ ಕಾರು (Zen Car) ಎಂಬುದು ಗೊತ್ತಾಗಿದೆ.
ಕಾರಿಗೆ ಬೆಂಕಿ ಹೊತ್ತಿದ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿಗಳು(Fire Brigade) ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.ಅಗ್ನಿ ಅವಘಡದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾರವಾರ ನಗರಠಾಣೆ(Karwar Town Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಉತ್ತರಕನ್ನಡ ಜಿಲ್ಲೆಯ ಮಹಿಳೆಯರ ಕಮಾಲ್