ಬೆಂಗಳೂರು(BANGLORE) : ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತಕ್ಕೆ ಸಂಬಂಧಿಸಿ ಶಾಸಕ ಸತೀಶ್ ಸೈಲ್(MLA SATISH SAIl) ಮುಖ್ಯಮಂತ್ರಿ ಸಿದ್ದರಾಮಯ್ಯ(SIDDARAMAIHA) ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ದುರಂತ ನಡೆದು ಹಲವು ದಿನಗಳಾದರೂ ಸಹ ಇನ್ನೂವರೆಗೆ ಮೂವರ ಮೃತದೇಹ ಪತ್ತೆಯಾಗಿಲ್ಲ. ಕಾರ್ಯಾಚರಣೆ ಅರ್ಧಕ್ಕೆ ಸ್ಥಗಿತವಾಗಿದ್ದು, ಮೂವರ ಕುಟುಂಬದವರು ಕಂಗಾಲಾಗಿದ್ದಾರೆ. ಹೀಗಾಗಿ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಡಬೇಕೆಂದರು. ಈಗಾಗಲೇ ಗಂಗಾವಳಿ(GANGAVALI) ನದಿಯಲ್ಲಿ ಮಣ್ಣು ಬಿದ್ದಿರುವ ಸ್ಥಳದಲ್ಲಿ ಡ್ರೆಜ್ಜಿಂಗ್ ಮಾಡಲು ಜಿಲ್ಲಾಡಳಿತಕ್ಕೆ ಕೋಟೆಷನ್ ನೀಡಲಾಗಿದೆ. ತಾನೇ ಆ ಹಣ ವ್ಯವಸ್ಥೆ ಮಾಡುತ್ತೇನೆ. ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದರು.
ಈಗಾಗಲೇ 41 ಲಕ್ಷ ರೂ. ಭರಣ ಮಾಡಲಾಗಿದ್ದು, ಇನ್ನೂ ಸಂಘಸಂಸ್ಥೆಗಳಿಂದ 10 ಲಕ್ಷ ರೂ.ನಲ್ಲಿ ಐದು ಲಕ್ಷ ರೂ. ಸಂಗ್ರಹವಾಗಿದೆ. ತಮ್ಮ ಶಾಸಕ ನಿಧಿಯಿಂದ 25 ಲಕ್ಷ, ಸಚಿವ ಮಂಕಾಳ್ ವೈದ್ಯ(MANKAL VAIDYA) ಮತ್ತು ಶಾಸಕ ಭೀಮಣ್ಣ ನಾಯ್ಕ ಅವರಿಂದ ತಲಾ ಹತ್ತತ್ತು ಲಕ್ಷ ರೂ. ಹಣ ಕೂಡಿಸಿ ಬೇಕಾಗುವ ಸುಮಾರು 81 ಲಕ್ಷ ರೂ ಜಮಾ ಮಾಡಲಾಗುವುದೆಂದರು. ಇನ್ನು ಹೆಚ್ಚಿನ ಹಣ ಬೇಕಾದಲ್ಲಿ ತಾವೇ ಕೈಯಿಂದ ಭರಿಸುತ್ತೇನೆಂದು ಹೇಳಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ(SHALINI RAJANISHA) ಗಮನಕ್ಕೆ ಶಾಸಕರು ಗಮನಕ್ಕೆ ತಂದಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರಿಗೆ ಈ ಸಂಬಂಧ ಮಾತನಾಡಿ, ಆದಷ್ಟು ಬೇಗ ನದಿಯಲ್ಲಿ ಡ್ರೆಜಿಂಗ್ ಕಾರ್ಯಾಚರಣೆ ಪ್ರಾರಭಿಸಬೇಕೆಂದರು. ಹೀಗಾಗಿ ಜಿಲ್ಲಾಧಿಕಾರಿ ಸಹ ಕಾರ್ಯಾಚರಣೆಗೆ ಒಪ್ಪಿದ್ದಾರೆನ್ನಲಾಗಿದೆ . ದುರಂತ ಸಂಭವಿಸಿದ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಸ್ಥಳ ಬಿಡದೇ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ತಂಡದೊಂದಿಗೆ ಇದ್ದು ಸಹಕರಿಸಿದ್ದರು. ಈಗಲೂ ಕೂಡ ಕ್ಷೇತ್ರದ ಜೊತೆಗೆ ಇದ್ದರೆಂಬುದು ತಿಳಿಯುತ್ತಿದೆ.
ಕಾಳಿ ಸೇತುವೆ ಕುಸಿತ ಮತ್ತು ಕ್ಷೇತ್ರದಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಸೈಲ್ ಸಿಎಂ ಮುಂದೆ ಅಭಿಪ್ರಾಯ ಮಂಡಿಸಿದ್ದಾರೆ.
ಇದನ್ನು ಓದಿ : ಕೋಳಿ ಪಡೆಯ ಮೇಲೆ ಪೊಲೀಸ್ ದಾಳಿ