ಗೋಕರ್ಣ : ಪ್ರವಾಸಿಗರನ್ನ ಹೊತ್ತೋಯ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದ ಘಟನೆ ಕುಮಟಾ ತಾಲೂಕಿನ ತದಡಿಯ ಅಳಿವೆ ಪ್ರದೇಶದಿಂದ ಅನತಿ ದೂರದಲ್ಲಿ ರವಿವಾರ ಸಂಜೆ ಸಂಭವಿಸಿದೆ.

ಈ ಟೂರಿಸ್ಟ್ ಬೋಟಿನಲ್ಲಿ 40 ಜನ ಪ್ರವಾಸಿಗರಿದ್ದರು. ರಜಾ ದಿನವಾಗಿದ್ದರಿಂದ ಪ್ರವಾಸಿಗರು ಹೆಚ್ಚಿದ್ದರು. ಘಟನೆಯಲ್ಲಿ ಬೋಟಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಡಂಗಿಯ ಗಣೇಶ್ ಎಂಬುವವರಿಗೆ ಸೇರಿದ ಬೋಟ್ ಆಗಿದ್ದು ಘಟನೆ ನಡೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ  ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.

ಮಕ್ಕಳೂ ಸೇರಿ ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನ ಬೋಟಿನಲ್ಲಿರಿಸಿದ್ದಕ್ಕೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.