ಗೋಕರ್ಣ(GOKARN) : ರಾಜ್ಯದ ಸಿನಿ ಪ್ರಿಯರಿಗೆ ಶಾಕ್ ನೀಡಿದ ಮಠ ಚಿತ್ರದ (Matha Cinema) ನಿರ್ದೇಶಕ ಗುರುಪ್ರಸಾದ್ (Director Guruprasad) ಸಾವಿನ ಬಳಿಕ ಅವರ ಮಾನವೀಯ(Humanity) ಗುಣಗಳನ್ನ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ನಿರ್ದೇಶಕ ಗುರುಪ್ರಸಾದ್ 2016 ರಲ್ಲಿ ಗೋಕರ್ಣಕ್ಕೆ(Gokarn) ಚಿತ್ರ ನಿರ್ದೇಶನ ಮಾಡಲು ಬಂದ ಸಂದರ್ಭದಲ್ಲಿ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎನ್ನುವ ಮಾನಸಿಕ ಅಸ್ವಸ್ಥನನ್ನ ಬದಲಾಯಿಸಿದ್ದರು. ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದ ಮುತ್ತಣ್ಣನನ್ನ ಮಾತನಾಡಿಸಿ ಅವರಿಗೆ ಕಟಿಂಗ್ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದರು.

ಅಲ್ಲದೇ ತಮ್ಮ ಚಿತ್ರ ನಿರ್ದೇಶನದಲ್ಲಿ (Film Direction) ಕೆಲಸ ಮಾಡಲು ಗುರುಪ್ರಸಾದ್ ಮುತ್ತಣ್ಣನನ್ನ ಬಳಸಿಕೊಂಡಿದ್ದರು. ಗುರುಪ್ರಸಾದ್ ಅವರ ಮಾನವೀಯ ಗುಣಕ್ಕೆ ಸ್ಥಳೀಯರಿಂದ‌ ಮೆಚ್ಚುಗೆ ವ್ಯಕ್ತವಾಗಿತ್ತು. ಈಗಲೂ ಸಹ ಘಟನೆಯನ್ನ ನೆನಪಿಸಿಕೊಂಡು ಗೋಕರ್ಣದ ಜನತೆ ಗುರುಪ್ರಸಾದ್ ಅವರಿಗೆ ಕಂಬನಿ (Tribute) ಮಿಡಿಯುತ್ತಿದ್ದಾರೆ.

ಇದನ್ನು ಓದಿ : ಹೋರಿ ಬೆದರಿಸುವ ಸ್ಪರ್ಧೆ. ಪ್ರಾಣ ಕಳೆದುಕೊಂಡ ಯುವಕ

ಖ್ಯಾತ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ ಶಾಸಕ

ಮೊಬೈಲ್ ಹಿಡಿದು ಅಡುಗೆ ಮಾಡುವವರೇ ಹುಷಾರ್