ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ವಾರಣಾಸಿ(Varanasi) : 86 ವರ್ಷದ ಹಿರಿಯ ಸಾಹಿತಿಯೊಬ್ಬರು ಎಲ್ಲವೂ ಇದ್ದು, ಎಲ್ಲರೂ ಇದ್ದು ವೃದ್ಧಾಶ್ರಮದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಉತ್ತರ ಪ್ರದೇಶದ(Uttarapradesh) ಹಿರಿಯ ಸಾಹಿತಿ ಶ್ರೀನಾಥ್ ಖಂಡೇಲ್ವಾಲ್(Shrinath Khandelalv) ಅವರು ಕಳೆದ ಮಾರ್ಚ್‌ನಿಂದ ವಾರಣಾಸಿಯ ವೃದ್ಧಾಶ್ರಮದಲ್ಲಿ(Varanasi Oldage Home) ವಾಸಿಸುತ್ತಿದ್ದರು. 80 ಕೋಟಿ ಆಸ್ತಿ ಒಡೆಯರಾಗಿದ್ದ ಅವರು 400 ಪುಸ್ತಕಗಳನ್ನು ಬರೆದ ಖ್ಯಾತ ಲೇಖಕರು ಕೂಡ. ಶ್ರೀನಾಥ್ ಖಂಡೇಲ್ವಾಲ್ ಅವರು ಜಗತ್ತಿಗೆ ವಿದಾಯ ಹೇಳುವ ಮುನ್ನ ಬದುಕಿದ ಬಾಳು ನಿಜಕ್ಕೂ ಶೋಚನೀಯವಾಗಿದೆ.
ಯುಪಿಯ ವಾರಣಾಸಿಯಲ್ಲಿ ಕೋಟಿಗಟ್ಟಲೆ ಆಸ್ತಿ ಇದ್ದರೂ ಅವರ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆದಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿದ ನಂತರವೂ ಮಗ ಮತ್ತು ಮಗಳು ಕೊನೆಯ ಬಾರಿ ತಂದೆಯ ಮುಖ ನೋಡಲು ಬಾರದಿರುವುದು ಕರುಳು ಹಿಂಡುವಂತಿತ್ತು.
ಶ್ರೀನಾಥ್ ಖಂಡೇಲ್ವಾಲ್ ಅವರ ಮಗ ದೊಡ್ಡ ಉದ್ಯಮಿ. ತಂದೆ ಅಂತ್ಯಕ್ರಿಯೆಗೆ ಬರಲು ನಿರಾಕರಿಸಿದರು. ಮಗಳು ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆ ಪೋನ್ ಕರೆಗಳಿಗೂ ಸಹ ಸ್ಪಂದಿಸಲಿಲ್ಲ ಎನ್ನಲಾಗಿದೆ.
ಕೋಟಿಗಟ್ಟಲೆ ಆಸ್ತಿ ಇದ್ದರೂ ಶ್ರೀನಾಥ್ ಖಂಡೇಲ್ವಾಲ್ ಕಾಶಿ ಕುಷ್ಠರೋಗ ಸೇವಾ ಸಂಘದ ವೃದ್ಧಾಶ್ರಮದಲ್ಲಿ ಅನಾಥರಾಗಿ ಕೊನೆಯ ಜೀವನ ಕಳೆಯಬೇಕಾಯಿತು.
ಒಮ್ಮೆ ಶ್ರೀನಾಥ್ ಖಂಡೇಲ್ವಾಲ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ದುಃಸ್ಥಿತಿಯ ಬಗ್ಗೆ ಮಾತನಾಡಿ 80 ಕೋಟಿ ಮೌಲ್ಯದ ಆಸ್ತಿ ಕಬಳಿಸಿ ಮಗ ಮತ್ತು ಮಗಳು ತನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದರಂತೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖಂಡೇಲ್ವಾಲ್ ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅವರ ಮಕ್ಕಳಿಗೆ ತಿಳಿಸಲು ಪ್ರಯತ್ನಿಸಿದ್ದರೂ ಸಹ ಮಗಳು ಮತ್ತು ಮಗ ಕೊನೆಯ ಬಾರಿ ತಂದೆಯನ್ನು ನೋಡಲು ಬರಲಿಲ್ಲ. ಶ್ರೀನಾಥ್ ಅವರ ಸ್ನೇಹಿತರು ಅಂತಿಮ ವಿಧಿಗಳನ್ನು ನೆರವೇರಿಸಿದರು. ಸಾಕಿ ಬೆಳೆಸಿದ ಮಕ್ಕಳು ಕೊನೆಗಾಲದಲ್ಲೂ ಅಪ್ಪನ ಮುಖ ನೋಡಲಾರದಷ್ಟು ಕಟುಕ ಹೃದಯದವರಾದರೇ ಎಂದು ಚಿಂತಿಸುವಂತಾಗಿದೆ.
ಇದನ್ನು ಓದಿ : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ
ಸೈಬರ್ ಕ್ರಿಮಿನಲ್ ಗಳಿಂದ ಅಪಾಯಕಾರಿ ಲಿಂಕ್. ಹೊಸ ವರ್ಷಕ್ಕೆ ಮೈಮರೆಯದಿರಿ ಎಚ್ಚರ.