ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ( Bhatkal) : ತಾಲೂಕಿನ ಮುಂಡಳ್ಳಿಯ ಹಾವಳಿಕಂಠದಲ್ಲಿರುವ  ಶ್ರೀ ಕಂಠಧೀರ, ಜಟಗ, ನಾಗ ಮತ್ತು ಗೋಳಿ ಹೆಡೆ ದೇವರ 15ನೇ ವರ್ಷದ ವರ್ಧಂತಿ ಉತ್ಸವ ದಿನಾಂಕ 13-06-2026ನೇ ಶನಿವಾರದಂದು ವಿಜ್ರಂಭಣೆಯಿಂದ ಜರುಗಲಿದೆ.

ಅಂದು ಬೆಳಿಗ್ಗೆ 9 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ದೇವತಾ ಪೂಜೆ ಹಾಗೂ ಶುದ್ಧತೆ ಹೋಮ ಮತ್ತು  12-30ಕ್ಕೆ ಮಹಾಪೂಜೆ ಜರುಗುವುದು.  ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮವಿದೆ.

ಸಾಯಂಕಾಲ 5.00 ಗಂಟೆಯಿಂದ  ಭಜನಾ ಕಾರ್ಯಕ್ರಮ ಆರಂಭವಾಗುವುದು. ಸಂಜೆ : 6-00 ರಿಂದ 7-00 ಗಂಟೆಯವರೆಗೆ ಜೈದುರ್ಗಾ ಭಜನಾ ತಂಡ ಹಾವಳಿಕಂಠ,  ಸಂಜೆ : 7-00 ರಿಂದ 8-00 ಗಂಟೆಯವರೆಗೆ ಶ್ರೀ ಮುರ್ಡೇಶ್ವರ ಭಜನಾ ತಂಡ ಹಾಗೂ  ರಾತ್ರಿ : 8-00 ರಿಂದ 9-00 ಗಂಟೆಯವರೆಗೆ ಶ್ರೀ ಮಹಾಸತಿ ಭಜನಾ ತಂಡ. ಬೆಳಕೆ ಇವರಿಂದ ಭಜನೆ ಇರುತ್ತದೆ.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಡಿಗ್ರಿ ಬಡ ಶಾಲಾ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೆರವೇರಿಸಲಾಗುತ್ತದೆ. ಹೀಗಾಗಿ ಭಕ್ತರು ದೇವತಾ ಕಾರ್ಯಕ್ಕೆ ಆಗಮಿಸಿ, ಪ್ರಸಾದ ಸ್ವೀಕರಿಸಿ ತನು-ಮನ-ಧನ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು  ಶ್ರೀ ಕಂಠಧೀರ, ಜಟಗ, ನಾಗ ಮತ್ತು ಗೋಳಿ ಹೆಡೆ ದೇವಾಲಯ ಆಡಳಿತ ಕಮಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ‌ಕೋರಿಕೊಂಡಿದ್ದಾರೆ.

ಇದನ್ನು ಓದಿ : ಸೇವೆಯ ನೆನಪಿಗಾಗಿ  ಸರ್ಕಾರಿ ಶಾಲೆಗಳಿಗೆ ವಾಟರ್ ಪ್ಯೂರಿಫೈಯರ್ ಕೊಡುಗೆಯಾಗಿ ನೀಡಿದ ಅಧಿಕಾರಿ