ಭಟ್ಕಳ(Bhatkal) : ತಾಲೂಕಿನಲ್ಲಿ ಉದ್ಭವಿಸಿರುವ ಮರಳು ಸಮಸ್ಯೆಯನ್ನ (Sand Problem) ಬಗೆಹರಿಸುವಂತೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು

ಪಟ್ಟಣದ ಆಟೋ ರಿಕ್ಷಾ ಮೈದಾನದಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಕೂಲಿ ಕಾರ್ಮಿಕರು, ಇಂಜಿನೀಯರ್ಸ್, ಗುತ್ತಿಗೆದಾರರು, ಟಿಪ್ಪರ್ ಮಾಲೀಕರು, ಸೆಂಟ್ರಿಂಗ್ ಕಾರ್ಮಿಕರು(Labour) ಸೇರಿದಂತೆ ಇತರರು ಬೃಹತ್ ಮೆರವಣಿಗೆ ನಡೆಸಿದರು. ಮುಖ್ಯರಸ್ತೆ, ಸಂಶುದ್ದಿನ್ ವೃತ್ತದವರೆಗೆ ಸಾಗಿ ಬಳಿಕ ಮಿನಿ ವಿಧಾನ ಸೌಧಕ್ಕೆ(Mini Soudha) ಆಗಮಿಸಿದರು.

ಮೆರವಣಿಗೆ ವೇಳೆ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರ, ಜಿಲ್ಲಾಡಳಿತದ ವಿರುದ್ಧ  ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವರ ಆಕ್ರೋಶ ಬುಗಿಲೆದ್ದಿತು. ರಾ.ಹೆದ್ದಾರಿ ತಡೆ ನಡೆಸಲು ಮುಂದಾದರು. ಸಂಘಟಕರು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದವರ ನಡುವೆ ಮಾತಿನ ಚಕಮಕಿ ನಡೆಯಿತು. ನಿಯಂತ್ರಿಸಲು ಮುಂದಾದ ಪೊಲೀಸರ ನಡುವೆಯೂ ವಾಗ್ವಾದ ನಡೆಯುವ ಹಂತಕ್ಕೆ ತಲುಪಿತು.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಸಚಿವರು ಬರುವಂತೆ ಪಟ್ಟು ಹಿಡಿದರು. ಮಿನಿ ವಿಧಾನಸೌಧದ ಎದುರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟಕರು ಪರಿಪರಿಯಾಗಿ ವಿನಂತಿಸಿದರೂ ಪ್ರತಿಭಟನಾಕಾರರ ಸಹನೆ ಕಟ್ಟೆಯೋಡೆಯಿತು. ಹೀಗಾಗಿ ಮರಳು ಸಮಸ್ಯೆಯನ್ನು ಬಗೆಹರಿಸುವಂತೆ  ಸಚಿವರು, ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದರು.

ತಲಾತಲಾಂತರದಿಂದ ಸರ್ಕಾರದ ನೀತಿಯಂತೆ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮರಳುಗಾರಿಕೆ, ಒಂದೇ ಸಮನೆ ನಿಂತಿರುವುದರಿಂದ, ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ಜೀವನ ನಿರ್ವಹಣೆಯ ಕಾಯಕವನ್ನಾಗಿಸಿಕೊಂಡಿರುವ  ಇಂಜಿನಿಯರ್ಸ್, ಗುತ್ತಿಗೆದಾರರು, ಸೆಂಟರಿಂಗ್ ಕಾರ್ಮಿಕರುಗಳು, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರು, ಪೇಂಟಿಂಗ್ ಕೂಲಿ ಕಾರ್ಮಿಕರು, ಟಿಪ್ಪರ್ ಮಾಲಿಕರು, ಲಗೇಜ್ ರಿಕ್ಷಾ ಮಾಲಿಕರು, ಸಿಮೆಂಟ್ ವರ್ತಕರು, ಸ್ಟೀಲ್ ವರ್ತಕರು ಹಾರ್ಡೇರ್ ವರ್ತಕರು, ಎಲ್ಲಾ ಸೇರಿ ಅಂದಾಜು 30ಸಾವಿರ ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದೆ.

ಭಟ್ಕಳ ಸಿವಿಲ್ ಎಂಜಿನಿಯರ್ ಅಸೋಶಿಯೇಶನ್(Bhatkal civil ಇಂಜಿನಿಯರ್), ಭಟ್ಕಳ ಕಟ್ಟಡ ನಿರ್ಮಾಣ (Building Association)ಮತ್ತು ಕೂಲಿ ಕಾರ್ಮಿಕರ ಸಂಘ(Labour sangha) , ಸೆಂಟ್ರಿಂಗ್ ಕಾರ್ಮಿಕರ ಸಂಘ (centring labour sangha), ಭಟ್ಕಳ ಕಟ್ಟಡ ಪೇಂಟಿಂಗ್ (Painting) ಕೂಲಿ ಕಾರ್ಮಿಕರ ಸಂಘ. ಟಿಪ್ಪರ್ ಮಾಲಿಕರ (Tipper Owner) ಸಂಘ (ರಿ.) ಮತ್ತು ಭಟ್ಕಳ ತಾಲೂಕು ಸಿವಿಲ್ ಗುತ್ತಿಗೆದಾರರ (Civil Contractor) ಸಂಘದ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಇದನ್ನು ಓದಿ : ಅರಣ್ಯ ವಸತಿ ಗೃಹ ಉದ್ಘಾಟನೆ

ಬೈಕ್ ನಲ್ಲಿ ತೆರಳುತ್ತಿದ್ದ ಶಿಕ್ಷಕನ ಮೇಲೆ ಚಿರತೆ ದಾಳಿ