ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಗಡಿ ಭಾಗ ಕಾರವಾರದ ಕಾಳಿ ನದಿಯ ತಟದಲ್ಲಿರುವ ಕೋಡಿಭಾಗದ ಖಾಫ್ರೀ ದೇವರ ಜಾತ್ರೆ ಅತಿ ವಿಜೃಂಭಣೆಯಿಂದ ಜರುಗಿತು.

ಯಾವುದೇ ಜಾತಿ-ಬೇಧವಿಲ್ಲದೆ ಹಿಂದು, ಕ್ರಿಶ್ಚಿಯನ್, ಮುಸ್ಲಿಮರಾದಿಯಾಗಿ ಸರ್ವ  ಧರ್ಮಿಯರು ಜಾತ್ರೆಯಲ್ಲಿ ಪಾಲ್ಗೊಂಡರು. ಭಕ್ತರು ದೇವರಿಗೆ ಮದ್ಯ, ಸಿಗರೇಟ್ ದೇವರಿಗೆ ನೀಡಿ ಕೃತಾರ್ಥರಾದರು.  ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಯಾದರೇ  ದೇವರಿಗೆ ಹರಕೆ ಸಲ್ಲಿಸುತ್ತಾರೆ.  ಬಂದಂಥ ಭಕ್ತರು ದೇವಾಲಯದ ಎದುರಿಗೆ ಮೇಣದಬತ್ತಿ ಹಚ್ಚಿ ಭಕ್ತಿ ಭಾವ ಪ್ರದರ್ಶಿಸಿದರು.

ಖಾಪ್ರಿ ದೇವ ಕುಟುಂಬವೊಂದರ ದೇವರಾಗಿದ್ದು, ಕಾಲ ಕ್ರಮೇಣ  ಕುಟುಂಬಕ್ಕೆ ಮಾತ್ರ ಸಿಮೀತವಾಗದೇ ಸರ್ವ ಧರ್ಮದವರನ್ನ ಕಾಯುತ್ತಿದ್ದಾನೆ.  ಕೋಡಿಭಾಗದ ಪುರಸಪ್ಪ ಆರಂಭದಲ್ಲಿ ಕಾಳಿ ತೀರದಲ್ಲಿ  ಪೂಜೆ ಆರಂಭಿಸಿದರು. ಇದೀಗ ಈ ದೇವನನ್ನ ನೆನೆಸಿಕೊಂಡರೇ ಪಾರಾಗ್ತಾರೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. 

ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ  ಕಾಳಿ ಸೇತುವೆ ಕುಸಿದು ಬಿದ್ದಾಗ ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿಯೊಂದು ಬಿದ್ದಾಗ ಕೂಡ ಯಾರಿಗೂ ಏನು ತೊಂದರೆಯಾಗದೇ ಇರುವುದು ದೇವರ ಮಹಿಮೆ ಅಂತಾ ಭಕ್ತರು ಹೇಳುತ್ತಾರೆ.  ಭಕ್ತರ ಮನದ ಇಚ್ಚೆಗಳನ್ನ ಪೂರೈಸುವ ಖಾಪ್ರಿ ದೇವರ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧಡೆಯಿಂದ ಭಕ್ತರು ಆಗಮಿಸಿದ್ದರು. ಸಂಜೆ ನಡೆದ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಇದನ್ನು ಓದಿ : ಶ್ವಾನ ಕಡಿತಕ್ಕೊಳಗಾದ ಮಹಿಳೆ ರೇಬಿಸ್ ರೋಗದಿಂದ ಸಾವು

ಕುಟುಂಬ ಸಮೇತ ಶತ್ರು ಸಂಹಾರ ಪೂಜೆ ಸಲ್ಲಿಸಿದ ದರ್ಶನ್.

ಹುಲ್ಲಿನ ಬಣಿವೆಗೆ ಆಕಸ್ಮಿಕ ಬೆಂಕಿ. ಬಡ ರೈತನಿಗೆ ಲಕ್ಷಾಂತರ ರೂ ಹಾನಿ.

ರೈಲಿಗೆ ಸಿಲುಕಿ ಎಎಸ್ಐ ಪುತ್ರಿ ದುರಂತ ಅಂತ್ಯ